
ಕಿಕ್ಕೇರಿ: ಕಾವ್ಯದ ಮೂಲಕ ಮೈಸೂರು ಮಲ್ಲಿಗೆ ಕಂಪನ್ನು ಪಸರಿಸಿದ ಅಪರೂಪದ ಕವಿ ಕೆ.ಎಸ್. ನರಸಿಂಹಸ್ವಾಮಿ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.
ಪಟ್ಟಣದ ಕೆಪಿಎಸ್ ಶಾಲಾವರಣದಲ್ಲಿ ಬುಧವಾರ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಮೈಸೂರು ಆಕಾಶವಾಣಿ ಕೇಂದ್ರ, ಮಂಡ್ಯ ಕರ್ನಾಟಕ ಸಂಘಗಳ ಆಶ್ರಯದಲ್ಲಿ ಏರ್ಪಡಿಸಿದ್ದ ‘ಕೆ.ಎಸ್.ನ. ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೆಎಸ್‌ನ ಕಾವ್ಯ ಓದುಗ, ಅಭಿಮಾನಿ ನಾನು. ಟ್ರಸ್ಟ್ ಹಮ್ಮಿಕೊಂಡಿರುವ ಕೆ.ಎಸ್.ನ. ಸ್ವಾಗತ ಕಮಾನು, ಸ್ಮಾರಕ, ಬಯಲುರಂಗಮಂದಿರದಂತಹ ಯಾವುದೇ ಕೆಲಸ ಅಡ್ಡಿಇಲ್ಲದೆ ಸಾಗಲು ಸಹಕರಾ ನೀಡುತ್ತೇನೆ’ ಎಂದರು.
‘ಕಿಕ್ಕೇರಿಯಲ್ಲಿ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಿಸಲು ಯತ್ನಿಸುವೆ’ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ, ‘ಕಿಕ್ಕೇರಿಯಲ್ಲಿ ಮೊದಲು ಬಯಲು ರಂಗಮಂದಿರ ಆಗಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕೆಎಸ್‌ನ ಕಾರ್ಯಕ್ರಮ ನಡೆಯಬೇಕು’ ಎಂದರು.
ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ‘ಕೆ.ಎಸ್.ನ ಹೆಸರು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪುವಂತೆ ಕೆ.ಎಸ್.ನ ರಥಯಾತ್ರೆ, ಗೀತಗಾಯನ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಸುರೇಶ್, ಮೈಸೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಟಿ.ಬಿ. ವಿದ್ಯಾಶಂಕರ್, ಸಾಹಿತಿ ಎಸ್.ಬಿ. ಶಂಕರೇಗೌಡ ಮಾತನಾಡಿದರು.
ಮನಗೆದ್ದ ಸಮೂಹ ಗಾಯನ: ಕಿಕ್ಕೇರಿ ಕೆಪಿಎಸ್ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕೆಎಸ್‌ನ ಗೀತೆಗಳನ್ನು ನೆರೆದಿದ್ದವರ ಮನಗೆದ್ದರು.
ನಗರ ಶ್ರೀನಿವಾಸ ಉಡುಪ, ಅಪ್ಪಗೆರೆ ತಿಮ್ಮರಾಜು, ಎ.ಡಿ. ಶ್ರೀನಿವಾಸ್. ಹಂಸಿನಿ, ಅಮೂಲ್ಯ, ನಾಗಮಂಗಲ ಶ್ರೀನಿವಾಸ ಮತ್ತಿತರರು ನರಸಿಂಹಸ್ವಾಮಿ ಅವರ ಹಲವು ಗೀತೆ ಹಾಡಿ ರಸದೌತಣ ಉಣಬಡಿಸಿದರು.
ಕೆಎಸ್‌ನ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ, ಕೆಎಸ್‌ನ ಗೀತಗಾಯನದಲ್ಲಿ ಭಾಗವಹಿಸಿದ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಟ್ರಸ್ಟಿ ಸುರೇಶ್, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ಟ್ರಸ್ಟಿ ಎ.ಸಿ. ಹಲಗೇಗೌಡ, ಪ್ರಾಂಶುಪಾಲ ಸಹದೇವು, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ. ಮಂಜುನಾಥ್, ಮುಖ್ಯಶಿಕ್ಷಕಿ ಮಮತಾ, ಎಪಿಎಂಸಿ ನಿರ್ದೇಶಕ ಮಧು, ಸಂಗೀತ ಶಿಕ್ಷಕ ವಿನಾಯಕ ಹೆಗ್ಗಡೆ, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಎನ್‌ಸಿಸಿ ಯೋಜನಾಧಿಕಾರಿ ಎಸ್.ಎಂ. ಬಸವರಾಜು, ಪುತಿನ ಟ್ರಸ್ಟ್ ಟ್ರಸ್ಟಿ ಕೆ.ಜೆ. ನಾರಾಯಣ, ಕಾಯಿ ಮಂಜೇಗೌಡ, ಶಿವರಾಮು, ಉಪನ್ಯಾಸಕ, ಶಿಕ್ಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.