ADVERTISEMENT

ಬಡವರಿಗೆ ನೆರವು ನೀಡುತ್ತಿದ್ದ ಕೆ.ಎಸ್.ಪುಟ್ಟಣ್ಣಯ್ಯ: ಸ್ವಾಮಿ ಆನಂದ್

ಕೆ.ಎಸ್.ಪುಟ್ಟಣ್ಣಯ್ಯ ರಂಗನಮನ–ಹೊಂಬಾಳೆ ನಾಟಕೋತ್ಸವ–2025’ದ ಸಮಾರೋಪ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:52 IST
Last Updated 25 ಡಿಸೆಂಬರ್ 2025, 6:52 IST
<div class="paragraphs"><p>ಪಾಂಡವಪುರ ತಾಲ್ಲೂಕು ಮೇಲುಕೋಟೆಯ ಪು.ತಿ.ನ.ಕಲಾಮಂದಿರದಲ್ಲಿ ಮಂಗಳವಾರ ನಡೆದ ಪುಟ್ಟಣ್ಣಯ್ಯ ರಂಗನಮನ–ಹೊಂಬಾಳೆ ನಾಟಕೋತ್ಸವದಲ್ಲಿ ರೈತ ಸಂಘದ ಹಿರಿಯ ಹೋರಾಟಗಾರ ಕೆ.ಟಿ.ಗೋವಿಂದೇಗೌಡ ಅವರಿಗೆ ಕೆ.ಎಸ್.ಪುಟ್ಟಣ್ಣಯ್ಯ ಹಸಿರು ಪುರಸ್ಕಾರ ನೀಡಿ ಗೌರವಿಸಲಾಯಿತು.&nbsp;&nbsp;</p></div>

ಪಾಂಡವಪುರ ತಾಲ್ಲೂಕು ಮೇಲುಕೋಟೆಯ ಪು.ತಿ.ನ.ಕಲಾಮಂದಿರದಲ್ಲಿ ಮಂಗಳವಾರ ನಡೆದ ಪುಟ್ಟಣ್ಣಯ್ಯ ರಂಗನಮನ–ಹೊಂಬಾಳೆ ನಾಟಕೋತ್ಸವದಲ್ಲಿ ರೈತ ಸಂಘದ ಹಿರಿಯ ಹೋರಾಟಗಾರ ಕೆ.ಟಿ.ಗೋವಿಂದೇಗೌಡ ಅವರಿಗೆ ಕೆ.ಎಸ್.ಪುಟ್ಟಣ್ಣಯ್ಯ ಹಸಿರು ಪುರಸ್ಕಾರ ನೀಡಿ ಗೌರವಿಸಲಾಯಿತು.  

   

ಮೇಲುಕೋಟೆ (ಪಾಂಡವಪುರ): ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯವರು ಮಾನವೀಯತೆ ಅಂತಃಕರಣವುಳ್ಳ ಹೋರಾಟಗಾರರಾಗಿದ್ದರು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ಕೃಷಿ ಆಂದೋಲನ ವೇದಿಕೆಯ ಸಂಚಾಲಕ ಸ್ವಾಮಿ ಆನಂದ್ ಹೇಳಿದರು.

ಮೇಲುಕೋಟೆಯ ಪು.ತಿ.ನ.ಕಲಾಮಂದಿರದಲ್ಲಿ ದೃಶ್ಯ ಟ್ರಸ್ಟ್‌, ಹಸಿರು ಭೂಮಿ ಟ್ರಸ್ಟ್‌ ಮಂಗಳವಾರ ರಾತ್ರಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ರಂಗನಮನ–ಹೊಂಬಾಳೆ ನಾಟಕೋತ್ಸವ–2025’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪುಟ್ಟಣ್ಣಯ್ಯ ಅವರದು ಹೆಂಗರುಳಾಗಿತ್ತು. ಸಾಲ ಮಾಡಿಯಾದರೂ ಬಡವರಿಗೆ ಜನಸಾಮಾನ್ಯರಿಗೆ ಹಣದ ನೆರವು ನೀಡುತ್ತಿದ್ದರು. ಅವರೊಬ್ಬ ಹೋರಾಟಗಾರ ಮತ್ತು ಶಾಸಕರಾಗಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಎಲ್ಲ ಸಮುದಾಯದ ದನಿಯಾಗಿದ್ದರು’ ಎಂದರು.

ADVERTISEMENT

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಪುಟ್ಟಣ್ಣಯ್ಯನವರಿಗೆ ರಂಗನಮನ ಸಲ್ಲಿಸುತ್ತಿರುವುದು ಅರ್ಥಪೂರ್ಣವಾಗಿದೆ’ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಹಿತಿ ಸತೀಶ್ ಜವರೇಗೌಡ ಮಾತನಾಡಿ, ‘ಪುಟ್ಟಣ್ಣಯ್ಯನವರು ಜಿಲ್ಲೆಗೆ ಘನತೆ ತರುವಂತಹ ಹೋರಾಟ ನಡೆಸಿ, ಜಿಲ್ಲೆಯಲ್ಲಿ ಜನಪರ ಹೋರಾಟಗಾರರಾಗಿ ಹೊಸ ದಿಕ್ಕು ಆಯಾಮ ನೀಡಿದರು’ ಎಂದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್ ಗೌಡ ರಂಗನಮನ ಸಲ್ಲಿಸಿದರು. ರೈತ ಸಂಘದ ಹಿರಿಯ ಹೋರಾಟಗಾರ ಕೆ.ಟಿ.ಗೋವಿಂದೇಗೌಡ ಮತ್ತು ಪ್ರಗತಿಪರ ರೈತ ಡಿ.ಎನ್.ಅನಿಲ್‌ ಕುಮಾರ್ ಅವರಿಗೆ ಕೆ.ಎಸ್.ಪುಟ್ಟಣ್ಣಯ್ಯ ಹಸಿರು ಪುರಸ್ಕಾರ ನೀಡಿ ಗೌರವರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಪು.ತಿ.ನ.ಟ್ರಸ್ಟ್‌ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ, ಪರಿಸರಕ್ಕಾಗಿ ನಾವು ಸಂಘಟನೆಯ ಪರಶುರಾಮೇಗೌಡ, ಕರ್ನಾಟಕ ಸರ್ವೋದಯ ಪಕ್ಷದ ರಾಜ್ಯಾಧ್ಯಕ್ಷ ಚಾಮರಸಮಾಲೀ ಪಾಟೀಲ್, ಚಲನಚಿತ್ರಿ ಸಂಗೀತ ನಿರ್ದೇಶಕ ನವೀನ್ ಸಜ್ಜು, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ಎಂ.ವಿನಯ್‌ಕುಮಾರ್, ವಿಕಸನ ಸಂಸ್ಥೆಯ ಅಧ್ಯಕ್ಷ ಮಹೇಶ್ ಚಂದ್ರ ಗುರು, ಪುಟ್ಟಣ್ಣಯ್ಯ ಫೌಂಡೇಷನ್‌ನ ಸ್ಮಿತಾ ಪುಟ್ಟಣ್ಣಯ್ಯ, ರಂಗಕರ್ಮಿ ಗಿರೀಶ್ ಮೇಲುಕೋಟೆ, ಹಸಿರು ಭೂಮಿ ಟ್ರಸ್‌ನ ಜ್ಞಾನೇಶ್ ನರಹಳ್ಳಿ, ಕೋಕಿಲ ನರಹಳ್ಳಿ ಇದ್ದರು.

ದೇವನೂರು ಮಹಾದೇವ ಅವರ ‘ಒಡಲಾಳ’ ನಾಟಕವನ್ನು ಬೆಂಗಳೂರಿನ ನೇಪಥ್ಯ ರಂಗತಂಡವು ಸಾಗರ್ ಎಸ್.ಗುಂಬಳ್ಳಿ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.

ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಮರಣೋತ್ತರ ಡಾಕ್ಟರೇಟ್ ಪ್ರಶಸ್ತಿ ನೀಡಬೇಕು
ಎ.ಎಲ್.ಕೆಂಪೂಗೌಡ ಜಿಲ್ಲಾಧ್ಯಕ್ಷ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.