
ಬೆಳಕವಾಡಿ: ಸಮೀಪದ ದ್ಯಾವಪಟ್ಟಣ - ದಾಸನದೊಡ್ಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಮಧ್ಯೆದಲ್ಲಿರುವ ಹಂದಿಕೆರೆಗೆ ತಡೆಗೋಡೆ ಇಲ್ಲದೆ ವಾಹನ ಸವಾರರು ಜೀವ ಭಯದಿಂದ ಸಂಚರಿಸುವಂತಾಗಿದೆ.
ಈ ರಸ್ತೆಯ ಸುಮಾರು 2 ಕಿ.ಮೀ ಉದ್ದಕ್ಕೂ ಕೆರೆ ಇದ್ದು, ತಡೆಗೋಡೆ ಇಲ್ಲವಾಗಿದೆ. ಈ ರಸ್ತೆಯಲ್ಲಿ ಒಂದು ಬದಿ ಕೆರೆ ಮತ್ತೊಂದು ಬದಿ ಗದ್ದೆಯ ಇಳಿಜಾರು ಇದೆ ಹಾಗೂ ರಸ್ತೆಯು ತಿರುವಿನಿಂದ ಕೂಡಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಹಾಗಾಗಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಕೆರೆಯ ರಸ್ತೆ ಬದಿಗೆ ತಡೆಗೋಡೆ ನಿರ್ಮಿಸಿ ಮುಂದೆ ಅಪಘಾತ ಆಗದಂತೆ ಹಾಗೂ ರಸ್ತೆಯ ತಿರುವಿನಲ್ಲಿ ಮುನ್ನೆಚ್ಚರಿಕೆಯ ನಾಮಫಲಕ ಹಾಕಬೇಕು ಎಂದು ಗ್ರಾಮದ ಮುಖಂಡ ಎಂ. ಸತೀಶ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.