ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುದ್ಧ ಸೇವಾ ಸಂಘ, ವಿಶ್ವಜ್ಞಾನಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಭಾನುವಾರ 2,569ನೇ ಬುದ್ಧ ಜಯಂತಿ ನಡೆಯಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚನ್ನಲಿಂಗನಹಳ್ಳಿ ಬೌದ್ಧಬಿಕ್ಕು ಜೇತವನದ ಮನೋರಕ್ಕಿತ ಭಂತೇಜಿ ಮಾತನಾಡಿ, ‘ನಾವು ಬೌದ್ಧ ಧರ್ಮದ ವಿಚಾರವನ್ನು ತಿಳಿದುಕೊಳ್ಳುವುದರ ಜೊತೆಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಬುದ್ಧ ಧಮ್ಮವನ್ನು ಬೋಧಿಸಿ, ಪಂಚಶೀಲ ತತ್ವವನ್ನು ಅನುಸರಿಸುವಂತೆ ಮಾಡುವ ಮೂಲಕ ಅವರು ಜೀವನದಲ್ಲಿ ಯಶಸ್ಸು ಕಾಣುವಂತೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಇಂಥ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ’ ಎಂದು ಹೇಳಿದರು.
ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ರಮುಖರಾದ ಚಿಕ್ಕಮಾಯಿಗಯ್ಯ, ಈರಯ್ಯ, ಮಾಯಪ್ಪ, ಬಸವರಾಜು, ನಾಗರಾಜು, ಟಿ.ಸಿ.ಪರಮೇಶ, ಮಂಜುನಾಥ, ರಜಿನಿ, ಟಿ.ಸಿ.ದೊರೆಸ್ವಾಮಿ, ಮಂಜುಳಾ, ರಾಚಯ್ಯ, ಚೆಕ್ಕೆರೆ ಶಿವಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.