ADVERTISEMENT

ಕೆಆರ್‌ಎಸ್‌ ಬಳಿ ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 1:39 IST
Last Updated 12 ಫೆಬ್ರುವರಿ 2021, 1:39 IST
ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್‌ನ ಬೃಂದಾವನ ಸಮೀಪ ವಿಶ್ವೇಶ್ವರಯ್ಯ ನಾಲೆಯ ಏರಿ ಮೇಲೆ ಬುಧವಾರ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದೆ
ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್‌ನ ಬೃಂದಾವನ ಸಮೀಪ ವಿಶ್ವೇಶ್ವರಯ್ಯ ನಾಲೆಯ ಏರಿ ಮೇಲೆ ಬುಧವಾರ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದೆ   

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್‌ನ ಬೃಂದಾವನ ಸಮೀಪ, ವಿಶ್ವೇಶ್ವರಯ್ಯ ನಾಲೆ ಏರಿಯ ಮೇಲೆ ಬುಧವಾರ ತಡರಾತ್ರಿ ಚಿರತೆಯೊಂದು ಬೋನಿಗೆ ಬಿದ್ದಿದೆ.

ಒಂದು ವಾರದ ಹಿಂದೆ ಬೃಂದಾವನದ ಉತ್ತರ ದ್ವಾರದ ಹತ್ತಿರ ಚಿರತೆ ಕಾಣಿಸಿಕೊಂಡಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡುವ ದೃಶ್ಯ ಸೆರೆಯಾಗಿತ್ತು. ಇದರಿಂದ ಜನರು ಭಯ ಭೀತರಾಗಿದ್ದರು. ಚಿರತೆಯ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿತ್ತು.

ಬೃಂದಾವನದ ದಕ್ಷಿಣ ಭಾಗದಲ್ಲಿ ಕೂಡ ಚಿರತೆ ಓಡಾಡಿದೆ. ಅದು ಬೇರೆ ಚಿರತೆ ಇರಬಹುದು ಎಂಬ ಶಂಕೆ ಇದೆ. ಹಾಗಾಗಿ ಅಲ್ಲಿಯೂ ಒಂದು ಬೋನು ಇರಿಸಿದ್ದೇವೆ. ಈಗ ಹಿಡಿದಿರುವ ಚಿರತೆಯನ್ನು ವನ್ಯ ಜೀವಿ ಧಾಮಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.