ADVERTISEMENT

ಕಿಕ್ಕೇರಿ: ಬೇಟೆ ಹೊತ್ತೊಯ್ದ ಚಿರತೆ ಹಳ್ಳಕ್ಕೆ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 3:55 IST
Last Updated 6 ಫೆಬ್ರುವರಿ 2021, 3:55 IST
ಮೃತಪಟ್ಟಿರುವ ಚಿರತೆಯನ್ನು ಅರಣ್ಯ ಅಧಿಕಾರಿಗಳು ಪರಿಶೀಲಿಸಿದರು
ಮೃತಪಟ್ಟಿರುವ ಚಿರತೆಯನ್ನು ಅರಣ್ಯ ಅಧಿಕಾರಿಗಳು ಪರಿಶೀಲಿಸಿದರು   

ಕಿಕ್ಕೇರಿ: ಸಮೀಪದ ಅಣೆಚಾಕನಹಳ್ಳಿ ಗ್ರಾಮಕ್ಕೆ ಬೇಟೆಗಾಗಿ ಗುರುವಾರ ತಡರಾತ್ರಿ ನುಗ್ಗಿದ ಸುಮಾರು 8 ತಿಂಗಳ ಮರಿ ಚಿರತೆ ಮೃತಪಟ್ಟಿದೆ.

ಬೇಟೆ ಅರಸಿ ಗ್ರಾಮಕ್ಕೆ ನುಗ್ಗಿದ ಚಿರತೆಯನ್ನು ಕಂಡು ಬೀದಿನಾಯಿಗಳು ಬೊಗಳಲು ಆರಂಭಿಸಿವೆ. ಸದ್ದು ತೀವ್ರಗೊಂಡಾಗ ಗ್ರಾಮದ ಹೊರವಲಯದಲ್ಲಿರುವ ಗೌರಮ್ಮ ಎಂಬವರ ಮನೆಯ ಕಡೆಗೆ ನುಗ್ಗಿದೆ. ಮನೆ ಮುಂಭಾಗ ಕಟ್ಟಿದ್ದ ನಾಯಿ ಕಂಡು ದಾಳಿ ಮಾಡಿದೆ.

ನಾಯಿಯನ್ನು ಕೊಂದು ಹೊತ್ತುಕೊಂಡು ಹೋಗಲು ಯತ್ನಿಸಿ ಮನೆಯ ಪಕ್ಕದಲ್ಲಿರುವ ಹಳ್ಳದ ಕಡೆಗೆ ಓಡಿದೆ. ಹಳ್ಳದ ಪಕ್ಕ ಇದ್ದ ದಿಣ್ಣೆ ಹತ್ತಲು ಸಾಧ್ಯವಾಗದೆ ಹಳ್ಳಕ್ಕೆ ಬಿದ್ದು ಪ್ರಾಣಬಿಟ್ಟಿದೆ.

ADVERTISEMENT

ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ಆಸ್ಪತ್ರೆ ಸಿಬ್ಬಂದಿ ಸ್ಥಳಕ್ಕೆ ಬಂದು ಮರಣೋತ್ತರ ಪರೀಕ್ಷೆ ನಡೆಸಿದರು.

ಈ ಪ್ರದೇಶದಲ್ಲಿ ಹಲವಾರು ಚಿರತೆಗಳಿದ್ದು, ಅವುಗಳನ್ನು ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರಿಗೆ ಮನವರಿಕೆ ಮಾಡಿದರು.

ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ವಲಯ ಅರಣ್ಯಾಧಿಕಾರಿ ಗಂಗಾಧರ್, ಉಪವಲಯ ಅರಣ್ಯಾಧಿಕಾರಿ ಭರತ್, ರಾಘವೇಂದ್ರ, ಶ್ರೀಕಾಂತ್, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.