ADVERTISEMENT

ಪಾಂಡವಪುರ: ಚಿರತೆ ದಾಳಿಗೆ ಮೇಕೆ, ಕುರಿಗಳ ಬಲಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 14:32 IST
Last Updated 4 ಡಿಸೆಂಬರ್ 2024, 14:32 IST
ಪಾಂಡವಪುರ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಚಿರತೆದಾಳಿಯಿಂದ ಬಲಿಯಾದ ಕುರಿ ಮತ್ತು ಮೇಕೆಗಳು
ಪಾಂಡವಪುರ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಚಿರತೆದಾಳಿಯಿಂದ ಬಲಿಯಾದ ಕುರಿ ಮತ್ತು ಮೇಕೆಗಳು   

ಪಾಂಡವಪುರ: ತಾಲ್ಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಮಂಗಳವಾರ ಚಿರತೆ ದಾಳಿ ಮಾಡಿ ಕುರಿ ಮತ್ತು ಮೇಕೆಗಳನ್ನು ಕೊಂದುಹಾಕಿದೆ.

ಗ್ರಾಮದ ಮಹದೇವು ಅವರಿಗೆ ಸೇರಿದ 5 ಕುರಿಗಳು ಮತ್ತು 3 ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ. ಮಹದೇವು ಅವರು ತಮ್ಮ ತೋಟದ  ಕೊಟ್ಟಿಗೆಯಲ್ಲಿ ಕೂಡಿ ಹಾಕಿದ ಸಂದರ್ಭ ದಾಳಿ ನಡೆಸಿದೆ. ಇದರಿಂದ ರೈತನಿಗೆ ಲಕ್ಷಾಂತರ ನಷ್ಟ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸರ್ಕಾರದಿಂದ  ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಚಿರತೆ ಹಾವಳಿ ತಪ್ಪಿಸಲು ಆಗ್ರಹ:

‘ಬೇಬಿ ಬೆಟ್ಟದ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ದಾಳಿ ಹೆಚ್ಚಾಗಿದ್ದು, ಇದರಿಂದ ರೈತರು ಹಸು, ಕರು, ಎಮ್ಮೆ ಮೇಕೆ, ಕುರಿಗಳನ್ನು ಮೇಯಿಸಲು ಭಯಪಡುವ ಸ್ಥಿತಿ ಇದೆ. ಚಿರತೆ ದಾಳಿಯಿಂದ ಈಗಾಗಲೇ ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದೇವೆ. ಚಿರತೆ ಹಾವಳಿ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಅರಣ್ಯ ಇಲಾಖೆಯ ಲವಕುಮಾರ್, ಹುಲ್ಕೆರೆ ಕರೀಗೌಡ, ಅಶೋಕ್, ರಾ.ಸ.ಹನುಮಂತೇಗೌಡ, ರವಿಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.