ಮದ್ದೂರು: ಗ್ರಾಮದೇವತೆ ಮದ್ದೂರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಭಾರಿ ದನಗಳ ಜಾತ್ರೆ ಆರಂಭವಾಗಿದ್ದು, ವಿವಿಧ ಪ್ರದೇಶಗಳಿಂದ ರೈತರು ಜಾನುವಾರುಗಳೊಂದಿಗೆ ಬರುತ್ತಿದ್ದಾರೆ.
ಮದ್ದೂರಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಇದೇ ಏ.15ರಂದು ಬಂಡಿ ಉತ್ಸವ ನಡೆಯಲಿದ್ದು, ಏ. 16ರಂದು ಕೊಂಡ ಮಹೋತ್ಸವ, ಏ.17ರಂದು ಸಿಡಿ ಮಹೋತ್ಸವ ಹಾಗೂ ಏ.19ರಂದು ಉಗ್ರ ನರಸಿಂಹಸ್ವಾಮಿ ರಥೋತ್ಸವವು ನಡೆಯಲಿದೆ.
ಪಟ್ಟಣದ ಪೇಟೆಬೀದಿ, ಸಂಜಯ ಚಿತ್ರಮಂದಿರದ ಬಳಿ, ಶಿಂಷಾ ಸಹಕಾರ ಬ್ಯಾಂಕ್ ಬಳಿ, ತಾಲ್ಲೂಕು ಕಚೇರಿಯ ಹಿಂಭಾಗ, ತಾಲ್ಲೂಕು ಕ್ರೀಡಾಂಗಣದ ಬಳಿ ಸೇರಿದಂತೆ ಹಲವು ಕಡೆಗಳಲ್ಲಿ ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ರೈತರು ತಮ್ಮ ರಾಸುಗಳನ್ನು ಕಟ್ಟಲು ಆರಂಭಿಸಿದ್ದಾರೆ.
ತಾಲ್ಲೂಕು, ಜಿಲ್ಲೆಯ ವಿವಿಧ ಭಾಗ ಅಲ್ಲದೇ ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರೈತರು ತಮ್ಮ ರಾಸುಗಳೊಂದಿಗೆ ಬಂದು ವ್ಯಾಪಾರ ವಹಿವಾಟಿನಲ್ಲಿ ತೊಡಗುತ್ತಾರೆ.
ಹಳ್ಳಿಕಾರ್ ಸೇರಿದಂತೆ ಹಲವು ತಳಿಯ ರಾಸುಗಳು ಸೇರುವ ಮದ್ದೂರಮ್ಮನ ದನಗಳ ಜಾತ್ರೆಗೆ ತನ್ನದೇ ಆದ ಮಹತ್ವವಿದ್ದು, ದಶಕಗಳ ಹಿಂದಿನಿಂದಲೂ ಇಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ.
ದನಗಳ ಜಾತ್ರೆಗೆ ಬರುವ ರೈತರು ತಮ್ಮ ರಾಸುಗಳನ್ನು ಬಣ್ಣ ಸೇರಿದಂತೆ ವಿವಿಧ ರೀತಿಯಲ್ಲಿ ಸಿಂಗರಿಸಿ, ನೆರಳಿಗಾಗಿ ಶಾಮಿಯಾನವನ್ನು ಹಾಕಿ, ದೀಪಾಲಂಕಾರ ಮಾಡಿ, ಧ್ವನಿ ವರ್ಧಕವನ್ನು ಹಾಕಿ ಖುಷಿಪಡುತ್ತಾರೆ.
ಪಶು ಚಿಕಿತ್ಸಾ ಸೌಲಭ್ಯ:
ಜಾತ್ರೆಗೆ ಬರುವ ಸಾವಿರಾರು ರಾಸುಗಳಿಗೆ ಅನುಕೂಲವಾಗುವ ಹಾಗೆ ಪಶುಪಾಲನಾ ಇಲಾಖೆಯಿಂದ ತುರ್ತು ಸಂಚಾರಿ ಪಶು ಚಿಕಿತ್ಸಾ ಘಟಕದ ವ್ಯವಸ್ಥೆ ಹಾಗೂ ಸೂಕ್ತ ನೀರಿನ ವ್ಯವಸ್ಥೆ ಸೇರಿದಂತೆ ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮರ್ಪಕವಾದ ನೆರಳಿನ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ಯಾವ ರೀತಿ ನಿರ್ವಹಣೆ ಮಾಡುತ್ತದೆ ಎಂಬುದು ರೈತರ ಮುಂದಿರುವ ಪ್ರಶ್ನೆಯಾಗಿದೆ.
ತಾಲ್ಲೂಕು ಆಡಳಿತವು ದನಗಳ ಜಾತ್ರೆಗೆ ಬರುವ ರೈತರಿಗೆ ತಂಗಲು ಸೂಕ್ತ ವ್ಯವಸ್ಥೆ ಹಾಗೂ ಬೇಸಿಗೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕುಮ.ನ ಪ್ರಸನ್ನಕುಮಾರ್ ಪ್ರಗತಿಪರ ಸಂಘಟನೆಗಳ ಮುಖಂಡ
ಮದ್ದೂರು: ಮುಂದಿನ ವಾರ ಆರಂಭವಾಗಲಿರುವ ಗ್ರಾಮದೇವತೆ ಮದ್ದೂರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಸಿದ್ಧ ಭಾರಿ ದನಗಳ ಜಾತ್ರೆ ಆರಂಭವಾಗಿದ್ದು ಕಳೆಗಟ್ಟುತ್ತಿದೆ. ಪಟ್ಟಣದ ಪೇಟೆಬೀದಿ ಸಂಜಯ ಚಿತ್ರಮಂದಿರದ ಬಳಿ ಶಿಂಷಾ ಸಹಕಾರ ಬ್ಯಾಂಕ್ ಬಳಿ ತಾಲ್ಲೂಕು ಕಚೇರಿಯ ಹಿಂಭಾಗ ತಾಲ್ಲೂಕು ಕ್ರೀಡಾಂಗಣದ ಬಳಿ ಸೇರಿದಂತೆ ಹಲವು ಕಡೆಗಳಲ್ಲಿ ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ರೈತರು ತಮ್ಮ ರಾಸುಗಳನ್ನು ಕಟ್ಟಲು ಆರಂಭಿಸಿದ್ದಾರೆ. ತಾಲ್ಲೂಕು ಜಿಲ್ಲೆಯ ವಿವಿಧ ಭಾಗ ಅಲ್ಲದೇ ರಾಮನಗರ ತುಮಕೂರು ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರೈತರು ತಮ್ಮ ರಾಸುಗಳೊಂದಿಗೆ ಬಂದು ವ್ಯಾಪಾರ ವಹಿವಾಟಿನಲ್ಲಿ ತೊಡಗುತ್ತಾರೆ. ಹಳ್ಳಿಕಾರ್ ಸೇರಿದಂತೆ ಹಲವು ತಳಿಯ ರಾಸುಗಳು ಸೇರುವ ಮದ್ದೂರಮ್ಮನ ದನಗಳ ಜಾತ್ರೆಗೆ ತನ್ನದೇ ಆದ ಮಹತ್ವವಿದ್ದು ದಶಕಗಳ ಹಿಂದಿನಿಂದಲೂ ಇಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ. ದನಗಳ ಜಾತ್ರೆಗೆ ಬರುವ ರೈತರು ತಮ್ಮ ರಾಸುಗಳನ್ನು ಬಣ್ಣ ಸೇರಿದಂತೆ ವಿವಿಧ ರೀತಿಯಲ್ಲಿ ಸಿಂಗರಿಸಿ ನೆರಳಿಗಾಗಿ ಶಾಮಿಯಾನವನ್ನು ಹಾಕಿ ದೀಪಾಲಂಕಾರ ಮಾಡಿ ಧ್ವನಿ ವರ್ಧಕವನ್ನು ಹಾಕಿ ಖುಷಿಪಡುತ್ತಾರೆ. ಜಾತ್ರೆಗೆ ಬರುವ ಸಾವಿರಾರು ರಾಸುಗಳಿಗೆ ಅನುಕೂಲವಾಗುವ ಹಾಗೆ ಪಶುಪಾಲನಾ ಇಲಾಖೆಯಿಂದ ತುರ್ತು ಸಂಚಾರಿ ಪಶು ಚಿಕಿತ್ಸಾ ಘಟಕದ ವ್ಯವಸ್ಥೆ ಹಾಗೂ ಸೂಕ್ತ ನೀರಿನ ವ್ಯವಸ್ಥೆ ಸೇರಿದಂತೆ ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮರ್ಪಕವಾದ ನೆರಳಿನ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ಯಾವ ರೀತಿ ನಿರ್ವಹಣೆ ಮಾಡುತ್ತದೆ ಎಂಬುದು ರೈತರ ಮುಂದಿರುವ ಪ್ರಶ್ನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.