
ಭಾರತೀನಗರ: ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ಅಭಿಮಾನಿ ಬಳಗದ ಸದಸ್ಯರೊಂದಿಗೆ ವಿವಿಧ ದೇವಾಲಯಗಳಲ್ಲಿ ವಿಷೇಷ ಪೂಜೆ ಸಲ್ಲಿಸಿದರು.
ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಸಮೀಪದ ಹನುಮಂತನಗರದ ಆತ್ಮಲಿಂಗೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿರುವ ಶಾಂತಿಧಾಮದಲ್ಲಿ ತಂದೆ ದಿ.ಜಿ.ಮಾದೇಗೌಡರ ಸಮಾಧಿಗೆ ಶಾಸಕ ಮಧು ಜಿ.ಮಾದೇಗೌಡ ಹೂಗುಚ್ಚ ಇಟ್ಟು ಪೂಜೆ ಸಲ್ಲಿಸಿದರು.
ನಂತರ ನಂತರ ಕಾರ್ಕಹಳ್ಳಿಯ ಬಸವೇಶ್ವರಸ್ವಾಮಿ, ಕೆ.ಎಂ.ದೊಡ್ಡ ಹಳೇ ಊರಿನ ವೆಂಕಟೇಶ್ವರಸ್ವಾಮಿ, ಚಿಕ್ಕಅರಸಿನಕೆರೆಯ ಕಾಲಭೈರವೇಶ್ವರಸ್ವಾಮಿ, ಮದ್ದೂರು ಹೊಳೆ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಕಹಳ್ಳಿಯಲ್ಲಿ ಅಭಿಮಾನಿ ಬಳಗದಿಂದ ತಮಟೆ, ಚರ್ಮವಾದ್ಯ ಮೇಳಗಳೊಂದಿಗೆ, ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ನೀಡಲಾಯಿತು. ಮಧು ಮಾದೇಗೌಡರಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಶಾಸಕ ಮಧು ಜಿ.ಮಾದೇಗೌಡ, ಆಡಂಬರದ ಹುಟ್ಟುಹಬ್ಬ ಬೇಡ ಎಂದು ತಿಳಿಸಿದ್ದೆ. ಹಾಗಾಗಿ ಸರಳವಾಗಿ ಆಚರಿಸಿದ್ದಾರೆ. ನನ್ನ ಮೇಲೆ ಅಪಾರ ಪ್ರೀತಿ, ಅಭಿಮಾನವಿಟ್ಟು ಹುಟ್ಟುಹಬ್ಬವನ್ನು ಇಷ್ಟೊಂದು ಪ್ರೀತಿಯಿಂದ ಆಚರಿಸಲು ಮುಂದಾದ ಎಲ್ಲಾರಿಗೂ ಆಭಾರಿಯಾಗಿದ್ದೇನೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವ ಜೊತೆಗೆ ಬಸವೇಶ್ವರ ದೇವಾಲಯದ ಗೋಪುರ ಕಾಮಗಾರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಮುಖಂಡರಾದ ಕದಲೂರು ರಾಮಕೃಷ್ಣ, ತೊರೆಶೆಟ್ಟಹಳ್ಳಿ ಸಿ.ನಾಗೇಗೌಡ, ಎಂ.ಪಿ.ಅಮರ್‌ಬಾಬು, ಗೊರವನಹಳ್ಳಿ ಸುದೀಪ್, ಸಂದೀಪ್, ಬಿ.ಗಿರೀಶ್, ಎನ್.ಕೆ.ಭರತೇಶ್, ಮಹೇಶ್, ಅಣ್ಣೂರು ಆರ್.ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್‌ಚಂದ್ರ, ಮನು, ಬಸಂತ್, ಮಧು, ನಟರಾಜು, ಕೃಷ್ಣ, ಭಾರತೀನಗರ ಶಿಕ್ಷಣ ಸಂಸ್ಥೆಯ ವಸತಿ ಶಾಲೆ ಪ್ರಾಂಶುಪಾಲ ಪುಟ್ಟಸ್ವಾಮಿ, ಕೆ.ಪಿ.ಶ್ರೀಧರ, ಸಿ.ಎ.ಕೆರೆ ಗ್ರಾಮದ ಶಿವಲಿಂಗೇಗೌಡ, ಪುಟ್ಟೇಗೌಡ, ವಿಜಯ್‌ಕುಮಾರ್, ಶೇಖರ್, ಸಿ.ಕೆ.ಮಹದೇವು, ಕರೀಗೌಡ ಪಾಲ್ಗೊಂಡಿದ್ದರು.
ರಕ್ತದಾನ ಶಿಬಿರ: ಇಲ್ಲಿನ ಭಾರತಿ ಕಾಲೇಜು ಆವರಣದಲ್ಲಿ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಮಿಮ್ಸ್‌ನ ರಕ್ತನಿಧಿ ಕೇಂದ್ರದ ಅಧಿಕಾರಿ ಮುರುಳೀಧರ್ ಭಟ್ ಹಾಗೂ ಸಿಬ್ಬಂದಿ ದಾನಿಗಳಿಂದ ರಕ್ತ ಸಂಗ್ರಹಿಸಿದರು.
197 ಮಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಭಾಧ್ಯಕ್ಷೆ ಶಿವಲಿಂಗಯ್ಯ, ರಾಜ್ಹಯಪಾಲನುಮಂತು, ಭಾರತಿ ಕಾಲೇಜು ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಭಾರತೀ ಹೆಲ್ತ್‌ಸೈನ್ಸ್ ನಿರ್ದೇಶಕ ತಮೀಜ್‌ಮಣಿ, ಭಾರತಿ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಮಹೇಶ್‌ಕುಮಾರ್ ಜಿ.ಲೋನಿ, ಬಾಲಸುಬ್ರಹ್ಮಣ್ಯಂ, ಮಂಜು ಜೇಕಬ್, ಶಾಂತಕುಮಾರ್, ಜಗದೀಶ್, ಆಸ್ಟರ್ ಆಸ್ಪತ್ರೆ ಅನಿಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.