ADVERTISEMENT

ಮಂಡ್ಯ: ರಸ್ತೆಯಲ್ಲಿ ರಾಗಿ ಹುಲ್ಲು ಒಕ್ಕಣೆ; ಕಾರು ಬೆಂಕಿಗಾಹುತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 15:40 IST
Last Updated 22 ಜನವರಿ 2026, 15:40 IST
   

ಬೆಳಕವಾಡಿ (ಮಂಡ್ಯ ಜಿಲ್ಲೆ): ಸಮೀಪದ ಕಗ್ಗಲೀಪುರ - ಹೊನಗನಹಳ್ಳಿ ಗ್ರಾಮಗಳ ರಸ್ತೆಯ ಮಧ್ಯದಲ್ಲಿ ಬುಧವಾರ ರಾತ್ರಿ ಹಾಕಿದ್ದ ರಾಗಿ ಹುಲ್ಲು ಒಕ್ಕಣೆಯಿಂದ ಕಾರೊಂದು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಕಗ್ಗಲೀಪುರ ಗ್ರಾಮದ ಮಹೇಶ್ ಎಂಬುವರು ತಮ್ಮ ಮೂವರು ಸ್ನೇಹಿತರೊಂದಿಗೆ ಮುಡುಕುತೊರೆ ಜಾತ್ರೆಗೆ ಹೋಗುತ್ತಿದ್ದಾಗ ಹೊನಗನಹಳ್ಳಿಯ ಮುನೇಶ್ವರ ದೇವಸ್ಥಾನದ ಬಳಿ ರಸ್ತೆಯಲ್ಲಿ ಹಾಕಿದ್ದ ರಾಗಿ ಹುಲ್ಲು ಕಾರಿನ ಎಂಜಿನ್‌ಗೆ ತಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ. ಕಾರಿನ ಒಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT