ADVERTISEMENT

ಮಂಡ್ಯ: ಎಚ್‌.ಡಿ.ಚೌಡಯ್ಯ ಪ್ರಶಸ್ತಿಗೆ ಆರ್‌. ರಾಜಶೇಖರ್‌, ಶಿವರಾಮೇಗೌಡ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 14:10 IST
Last Updated 23 ಸೆಪ್ಟೆಂಬರ್ 2024, 14:10 IST
<div class="paragraphs"><p>ಆರ್‌. ರಾಜಶೇಖರ್‌,&nbsp;ಶಿವರಾಮೇಗೌಡ </p></div>

ಆರ್‌. ರಾಜಶೇಖರ್‌, ಶಿವರಾಮೇಗೌಡ

   

ಮಂಡ್ಯ: 2024ನೇ ಸಾಲಿನ ರಾಜ್ಯ ಮಟ್ಟದ ‘ಎಚ್‌.ಡಿ.ಚೌಡಯ್ಯ ಸಮಾಜ ಸೇವಾ ಪ್ರಶಸ್ತಿ’ಗೆ ಕೋಲಾರ ಜಿಲ್ಲೆಯ ಚಾಮರಹಳ್ಳಿಯ ‘ಜೀವ ಸಂಜೀವನ ನ್ಯಾಚುರಲ್‌ ಲೈಫ್‌’ ಸಂಸ್ಥಾಪಕ ಆರ್‌.ರಾಜಶೇಖರ್‌, ‘ಎಚ್‌.ಡಿ.ಚೌಡಯ್ಯ ಕೃಷಿ ಪ್ರಶಸ್ತಿ’ಗೆ ಮದ್ದೂರು ತಾಲ್ಲೂಕಿನ ಮಲ್ಲನಕುಪ್ಪೆಯ ಸಮಗ್ರ ಸಾವಯವ ಕೃಷಿಕ ಶಿವರಾಮೇಗೌಡ ಹಾಗೂ ‘ಎಚ್‌.ಡಿ.ಚೌಡಯ್ಯ ಗ್ರಾಮೀಣಾಭಿವೃದ್ಧಿ ಪ್ರಶಸ್ತಿ’ಗೆ ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿಯ ಸರ್ಕಾರಿ ಪ್ರೌಢಶಾಲೆ ಆಯ್ಕೆಯಾಗಿದೆ ಎಂದು ಜನತಾ ಶಿಕ್ಷಣ ಟ್ರಸ್ಟ್(ಪಿಇಟಿ) ನಿರ್ದೇಶಕ ರಾಮಲಿಂಗಯ್ಯ ಹೇಳಿದರು.

ಈ ಇಬ್ಬರು ಸಾಧಕರು ಮತ್ತು ಒಂದು ಶಾಲೆಗೆ ತಲಾ ₹20 ಸಾವಿರ ನಗದು ಒಳಗೊಂಡ ಪ್ರಶಸ್ತಿಯನ್ನು ನಗರದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ನಿತ್ಯ ಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ಸೆ.25ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ADVERTISEMENT

ಜನತಾ ಶಿಕ್ಷಣ ಟ್ರಸ್ಟ್‌ ಸಹಯೋಗದಲ್ಲಿ ಎಚ್‌.ಡಿ.ಚೌಡಯ್ಯರವರ 97ನೇ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೇಬಿಮಠದ ಪೀಠಾಧಿಪತಿ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್‌ ಆನಂದ ಅಧ್ಯಕ್ಷತೆ ವಹಿಸುವರು. ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್ ಹಾಗೂ ಧರ್ಮದರ್ಶಿ ಎಚ್.ಸಿ. ಮೋಹನ್‌ಕುಮಾರ್ ಭಾಗವಹಿಸುವರು ಎಂದರು.

ಹೊಳಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಚ್.ಕೆ.ಸಂಜನಾ, ಎಚ್.ಎನ್.ಧನುಷ್, ಹೊಳಲು ವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ಎನ್.ಚಂದನಾ ಹಾಗೂ ಹುಳ್ಳೇನಹಳ್ಳಿಯ ಎಚ್.ಪಿ.ಕಿಶೋರ್‌ಗೌಡ ಎಂಬ ವಿದ್ಯಾರ್ಥಿಗಳಿಗೆ ತಲಾ ₹4 ಸಾವಿರ ನಗದು ಜತೆಗೆ ಪ್ರತಿಭಾ ವಿದ್ಯಾರ್ಥಿ ಪ್ರಶಸ್ತಿ  ನೀಡಲಾಗುವುದು ಎಂದು ವಿವರಿಸಿದರು.

ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.