ADVERTISEMENT

ಜಿ. ಪರಮೇಶ್ವರ್ ವಿರುದ್ಧ ಪೋಸ್ಟ್: ಶಿವರಾಜ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ.

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 16:29 IST
Last Updated 1 ಜೂನ್ 2023, 16:29 IST
ಶಾಸಕ ಡಾ.ಜಿ. ಪರಮೇಶ್ವರ
ಶಾಸಕ ಡಾ.ಜಿ. ಪರಮೇಶ್ವರ   

ಮದ್ದೂರು: ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ದಲಿತ ಮುಖಂಡ ಮರಳಿಗ ಶಿವರಾಜ್ ರನ್ನು ಮದ್ದೂರು ಪೊಲೀಸ್ ರು ಗುರುವಾರ ಬಂಧಿಸಿ, ರಾತ್ರಿ ವೇಳೆಗೆ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆಗೋಳಿಸಿದ್ದಾರೆ.

ಈ ಬಗ್ಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಅಧ್ಯಕ್ಷ ಕೆ.ದೊರೆಸ್ವಾಮಿ ನೀಡಿದ ದೂರಿನ್ವನಯ ಪೋಲೀಸರು ಮರಳಿಗ ಶಿವರಾಜ್ ವಿರುದ್ಧ ಐಪಿಸಿ ಸೆಕ್ಷನ್ 153 ರ ಅನ್ವಯ ಪ್ರಟರಣ ದಾಖಲು ಮಾಡಿಕೊಂಡು ಬಂಧಿಸಿದ್ದರು.

ಆರೋಪಿ ಮರಳಿಗ ಶಿವರಾಜ್ ಕಳೆದ ಮೇ.30 ರಂದು ಗೃಹ ಸಚಿವ ಜಿ.ಪರಮೇಶ್ವರ್ ಒಬ್ಬ ಅಯೋಗ್ಯ, ಸ್ವಂತ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ. ಈತ ಅಂಬೇಡ್ಕರ್ ಅವರ ಆಶಯಗಳನ್ನು ಉಳಿಸಲಿಲ್ಲ. ಆರ್.ಎಸ್.ಎಸ್ ನವರ ಜೊತೆ ನಂಟು ಹೊಂದಿದ್ದಾರೆ. ಇವರ ಬಗ್ಗೆ ತಾಕತ್ ಇದ್ದವರು ಉತ್ತರಿಸಲಿ ಎಂದು ಜಾಲತಾಣದಲ್ಲಿ ಅವಹೇಳನವಾಗಿ ಪೋಸ್ಟ್ ನಿಂದಿಸಿದ್ದಾರೆ ಎಂದು ದೂರುದಾರ ದೊರೆಸ್ವಾಮಿ ದಾಖಲೆ ಸಮೇತ ಪೋಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ ಬಲಗೈ ಬಣದವರ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ. ಮುಂದಿನ ದಿನಗಳಲ್ಲಿ ದಲಿತ ಜನಾಂಗದವರ ನಡುವೆ ಘರ್ಷಣೆಗಳು ನಡೆದು ಶಾಂತಿ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ಮರಳಿಗ ಶಿವರಾಜ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ದೂರುದಾರ ದೊರೆಸ್ವಾಮಿ ಉಲ್ಲೇಖಿಸಿದ್ದಾರೆ.

ADVERTISEMENT

ಈ ಬಗ್ಗೆ ಆರೋಪಿ ಶಿವರಾಜ್ ರನ್ನು ಬಂಧಿಸಿ ನಂತರ ರಾತ್ರಿ ವೇಳೆಗೆ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆಗೋಳಿಸಿರುದಾಗಿ ಮದ್ದೂರು ಪೊಲೀಸ್ ಠಾಣೆಯ ಸಿಪಿಐ ಸಂತೋಷ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.