ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನೆ ಪ್ರಾಧಿಕಾರದ ಮೂವರು ನೌಕರರು
ಮಂಡ್ಯ: ನಗರ ಯೋಜನೆ ಅನುಮೋದನೆಗಾಗಿ ₹30 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನೆ ಪ್ರಾಧಿಕಾರದ ಮೂವರು ನೌಕರರು ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಹಾಯಕ ನಿರ್ದೇಶಕಿ ಅನನ್ಯಾ, ನಗರ ಯೋಜಕರಾದ ಸೌಮ್ಯಾ ಮತ್ತು ಹರೀಶ್ ಬಂಧಿತ ನೌಕರರು.
ಲಂಚ ಕೇಳುತ್ತಿರುವ ಬಗ್ಗೆ ಮದ್ದೂರು ತಾಲ್ಲೂಕಿನ ಚಂದೂಪುರದ ನಿವಾಸಿ ಪುನೀತ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಮಂಗಳವಾರ ಕಚೇರಿಯಲ್ಲಿ ₹15 ಸಾವಿರ ಮುಂಗಡ ಪಡೆಯುವ ವೇಳೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಬ್ಯಾಟರಾಯನಗೌಡ ನೇತೃತ್ವದ ತಂಡ ಸಾಕ್ಷ್ಯಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ. ಮಂಡ್ಯ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.