ರಶ್ಮಿ ಮತ್ತು ಆಕೆಯ ಪುತ್ರಿ ದಿಶಾ
ಮಂಡ್ಯ: ಇಲ್ಲಿಯ ನೆಹರು ನಗರ ಬಡಾವಣೆಯ ಮನೆಯೊಂದರಲ್ಲಿ ಬುಧವಾರ ತಾಯಿ–ಮಗಳು ಇಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಕಿರುಗಾವಲು ಗ್ರಾಮದವರಾದ ರಶ್ಮಿ (28) ಮತ್ತು ಆಕೆಯ ಮಗಳು ದಿಶಾ (9) ಆತ್ಮಹತ್ಯೆಗೆ ಶರಣಾದವರು.
ರಶ್ಮಿ ಅವರನ್ನು ಹತ್ತು ವರ್ಷಗಳ ಹಿಂದೆ ಚನ್ನಪಟ್ಟಣ ಮೂಲದ ರಾಜು ಎಂಬುವರ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಐದು ವರ್ಷ ಚೆನ್ನಾಗಿದ್ದ ದಂಪತಿ, ಕೌಟುಂಬಿಕ ಕಲಹದಿಂದ ಕೆಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದರು. ಇವರ ಪುತ್ರಿ ದಿಶಾ ಖಾಸಗಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಳು.
‘ಗಂಡನಿಂದ ದೂರವಿದ್ದ ರಶ್ಮಿ ಮಂಡ್ಯದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈಕೆ ಒಂಟಿತನದಿಂದ ಜುಗುಪ್ಸೆಗೊಂಡು, ತನ್ನ ಮಗಳೊಂದಿಗೆ ಒಂದೇ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ‘ಡೆತ್ ನೋಟ್’ ಲಭ್ಯವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಮಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಸಾಗಿಸಲಾಯಿತು. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.