ADVERTISEMENT

ಸೊಸೆ ಸಾವಿನಿಂದ ಸುದ್ದಿಯಿಂದ ಮನನೊಂದ ಅತ್ತೆ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 15:28 IST
Last Updated 25 ನವೆಂಬರ್ 2023, 15:28 IST
ಹುಚ್ಚಮ್ಮ
ಹುಚ್ಚಮ್ಮ   

ನಾಗಮಂಗಲ: ಎರಡನೇ ಸೊಸೆಯ ಸಾವಿನಿಂದ ಮನನೊಂದ ಅತ್ತೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಕಾಡುಅಂಕನಹಳ್ಳಿಯಲ್ಲಿ ಗುರುವಾರ ನಡೆದಿದೆ.

ಸೊಸೆ ಸುಶೀಲಾ (42), ಅತ್ತೆ ಹುಚ್ಚಮ್ಮ (75) ಮೃತಪಟ್ಟವರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುಶೀಲಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ನಂತರ, ಬೇರೊಂದು ಆಸ್ಪತ್ರೆಗೆ ಅವರನ್ನು ದಾಖಲಿಸಲು ಸಿದ್ಧರಾಗುತ್ತಿದ್ದಾಗಲೇ ಉಸಿರಾಟದ ಸಮಸ್ಯೆ ಉಲ್ಬಣಗೊಂಡು ಮನೆಯಲ್ಲೇ ಮೃತಪಟ್ಟರು.

ನಂತರ, ಕೆಲವೇ ಹೊತ್ತಿನಲ್ಲಿ ಅತ್ತೆ ಹುಚ್ಚಮ್ಮ ಅವರಿಗೆ ಹೃದಯಾಘಾತವಾಗಿ ಅಸ್ವಸ್ಥಗೊಂಡರು. ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಹುಚ್ಚಮ್ಮ ಅವರಿಗೆ ಐವರು ಪುತ್ರರಿದ್ದು, ಸುಶೀಲಾ 2ನೇ ಪುತ್ರನ ಪತ್ನಿಯಾಗಿದ್ದರು, ಹುಚ್ಚಮ್ಮ– ಸುಶೀಲಾ ಇಬ್ಬರೂ ತಾಯಿ– ಮಗಳಂತಿದ್ದರು. ಘಟನೆಯ ನಂತರ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ADVERTISEMENT
ಸುಶೀಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.