ADVERTISEMENT

ಜನ್ಮದಿನದಲ್ಲಿ ಸಾರ್ಥಕ ಕಾರ್ಯಗಳು ನಡೆಯಲಿ: ಎಂ. ಪುಟ್ಟೇಗೌಡ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 13:15 IST
Last Updated 1 ಜೂನ್ 2025, 13:15 IST
<div class="paragraphs"><p>ಶ್ರೀರಂಗಪಟ್ಟಣ ತಾಲ್ಲೂಕಿನ ಕೂಡಲಕುಪ್ಪೆಯಲ್ಲಿ ಉದ್ಯೋಗದಾತ ಫೌಂಡೇಶನ್‌ ಭಾನುವಾರ ಏರ್ಪಡಿಸಿದ್ದ ಆಪರೇಷನ್‌ ಸಿಂಧೂರ ಸಂಭ್ರಮಾಚರಣೆ ಹಾಗೂ ಉದ್ಯೋಗದಾತ ಸಂಸ್ಥೆ ಮುಖ್ಯಸ್ಥ ಡಿ.ಬಿ. ರುಕ್ಮಾಂಗದ ಅವರ ಜನ್ಮ ದಿನಾಚರಣೆ ನಿಮಿತ್ತ ವಿವಿಧ ಕ್ಷೇತ್ರಗಳ ಸಾಧಕರನ್ನು ಓಂ ಶ್ರೀನಿಕೇತನ ಟ್ರಸ್ಟ್‌ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಂ. ಪುಟ್ಟೇಗೌಡ ಸನ್ಮಾನಿಸಿದರು. </p></div>

ಶ್ರೀರಂಗಪಟ್ಟಣ ತಾಲ್ಲೂಕಿನ ಕೂಡಲಕುಪ್ಪೆಯಲ್ಲಿ ಉದ್ಯೋಗದಾತ ಫೌಂಡೇಶನ್‌ ಭಾನುವಾರ ಏರ್ಪಡಿಸಿದ್ದ ಆಪರೇಷನ್‌ ಸಿಂಧೂರ ಸಂಭ್ರಮಾಚರಣೆ ಹಾಗೂ ಉದ್ಯೋಗದಾತ ಸಂಸ್ಥೆ ಮುಖ್ಯಸ್ಥ ಡಿ.ಬಿ. ರುಕ್ಮಾಂಗದ ಅವರ ಜನ್ಮ ದಿನಾಚರಣೆ ನಿಮಿತ್ತ ವಿವಿಧ ಕ್ಷೇತ್ರಗಳ ಸಾಧಕರನ್ನು ಓಂ ಶ್ರೀನಿಕೇತನ ಟ್ರಸ್ಟ್‌ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಂ. ಪುಟ್ಟೇಗೌಡ ಸನ್ಮಾನಿಸಿದರು.

   

ಶ್ರೀರಂಗಪಟ್ಟಣ: ಜನ್ಮದಿನ ಆಚರಣೆ ತೋರಿಕೆಯ ಪ್ರದರ್ಶನವಾಗದೆ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾರ್ಥಕಗೊಳಿಸಬೇಕು ಎಂದು ಓಂ ಶ್ರೀನಿಕೇತನ ಟ್ರಸ್ಟ್‌ ಅಧ್ಯಕ್ಷ ಎಂ. ಪುಟ್ಟೇಗೌಡ ಹೇಳಿದರು.

ತಾಲ್ಲೂಕಿನ ಕೂಡಲಕುಪ್ಪೆ ಗೇಟ್ ಬಳಿಯ ಗಣಪತಿ ದೇವಾಲಯದ ಆವರಣದಲ್ಲಿ ಓಂ ಶ್ರೀನಿಕೇತನ ಟ್ರಸ್ಟ್ ಮತ್ತು ಉದ್ಯೋಗದಾತ ಫೌಂಡೇಶನ್‌ ಭಾನುವಾರ ಏರ್ಪಡಿಸಿದ್ದ ಆಪರೇಷನ್‌ ಸಿಂಧೂರ ಸಂಭ್ರಮಾಚರಣೆ ಹಾಗೂ ಉದ್ಯೋಗದಾತ ಸಂಸ್ಥೆ ಮುಖ್ಯಸ್ಥ ಡಿ.ಬಿ. ರುಕ್ಮಾಂಗದ ಅವರ ಜನ್ಮ ದಿನಾಚರಣೆ ನಿಮಿತ್ತ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ADVERTISEMENT

‘ಡಿ.ಬಿ. ರುಕ್ಮಾಂಗದ ನೂರಾರು ಮಂದಿಗೆ ಉದ್ಯೋಗ ಕೊಡಿಸಿದ್ದಾರೆ. ಹತ್ತಾರು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಒಂದು ಸಾವಿರ ಯುನಿಟ್‌ಗೂ ಹೆಚ್ಚು ರಕ್ತ ಸಂಗ್ರಹಿಸಿ ಕೊಟ್ಟಿದ್ದಾರೆ. ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಿ ಆಶ್ರಯ ಕಲ್ಪಿಸಿದ್ದಾರೆ. ಅವರ ಜನಪರ ಕಾರ್ಯಗಳು ಯುವ ಜನಾಂಗಕ್ಕೆ ಮಾದರಿಯಾಗಿವೆ’ ಎಂದು ಶ್ಲಾಘಿಸಿದರು.

ಕಿರುತೆರೆ ನಟ ಚಂದ್ರಪ್ರಭ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಆಪ‍ರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸೈನಿಕರ ಧೈರ್ಯ, ಸಾಹಸ ನಮಗೆ ಸ್ಪೂರ್ತಿಯಾಗಬೇಕು. ಯುವ ಜನಾಂಗದ ದುಶ್ಚಟಗಳಿಗೆ ದಾಸರಾಗಬಾರದು. ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಡಿ.ಬಿ. ರುಕ್ಮಾಂಗದ ಪ್ರಸ್ತಾವಿಕ ಮಾತುಗಳಾಡಿದರು. ಕುಸ್ತಿಯಲ್ಲಿ ಬೆಳ್ಳಿ ಗದೆ ವಿಜೇತ ದರಸಗುಪ್ಪೆ ಗ್ರಾಮದ ಪೈ. ವಿಜೇಂದ್ರ, ರಾಷ್ಟ್ರಮಟ್ಟದ ಅಥ್ಲೆಟಿಕ್‌ ಪಟು ಬೆಳಗೊಳ ಪಿ. ಚಿರಂತ್‌, ಹ್ಯಾಂಡ್ ಬಾಲ್‌ ಮತ್ತು ಕಾಫ್‌ಬಾಲ್‌ ಆಟಗಾರ ಎನ್‌. ಲಕ್ಷ್ಮೀಶ್ ಕುಮಾರ್‌, ಪ್ರತಿಭಾವಂತ ವಿದ್ಯಾರ್ಥಿ ಡಿ.ಎಂ. ಮೋಹಿತ್‌ಗೌಡ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್‌. ಅನುಪಮಾ, ಕೃಷಿಕ ಸಮಾಜದ ಅಧ್ಯಕ್ಷ ಕಡತನಾಳು ಬಾಲಕೃಷ್ಣ, ಕರವೇ ಮುಖಂಡ ಸಿ. ಸ್ವಾಮಿಗೌಡ , ವಿಕ್ರಾಂತ್‌ ಲೋಕೇಶ್, ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಬಿ.ಡಿ. ರಜನಿಕಾಂತ್‌, ಪಿ. ಮಂಜುರಾಂ, ಆರ್‌. ರಾಘವೇಂದ್ರ, ವಿ. ನಾರಾಯಣ್‌, ಗೋಪಾಲಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.