ADVERTISEMENT

ವೈರಮುಡಿ–ರಾಜಮುಡಿ ಕಿರೀಟಗಳನ್ನು ಹೊತ್ತು ನಡೆದ ಶಾಸಕ ದರ್ಶನ್ ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 15:21 IST
Last Updated 7 ಏಪ್ರಿಲ್ 2025, 15:21 IST
<div class="paragraphs"><p>ಪಾಂಡವಪುರಕ್ಕೆ ಬಂದ ವಜ್ರಖಚಿತ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೊತ್ತು ನಡೆದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು</p></div>

ಪಾಂಡವಪುರಕ್ಕೆ ಬಂದ ವಜ್ರಖಚಿತ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೊತ್ತು ನಡೆದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು

   

ಪಾಂಡವಪುರ: ವಜ್ರಖಚಿತ ವೈರಮುಡಿ ಮತ್ತು ರಾಜಮುಡಿ ಕಿರೀಟಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.

ತಾಲ್ಲೂಕು ಗಡಿಭಾಗ ಪಿಎಸ್‌ಎಸ್‌ಕೆ ಬಳಿ ಬಂದಾಗ ತಾಲ್ಲೂಕು ಆಡಳಿತವು ಸ್ವಾಗತಿಸಿತು.

ADVERTISEMENT

ಬಳಿಕ ವೈರಮುಡಿ ಮತ್ತು ರಾಜಮುಡಿ ಕಿರೀಟವು ಪಾಂಡವಪುರ ಪಟ್ಟಣದ ತಾಲ್ಲೂಕು ಆಡಳಿತ ಸೌಧಕ್ಕೆ ಬಂದಾಗ ವಾದ್ಯ, ವೀರಭದ್ರ ಕುಣಿತ, ಡೊಳ್ಳು ಕುಣಿತಗಳೊಂದಿಗೆ ಸ್ವಾಗತಿಸಲಾಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಿರೀಟಗಳನ್ನು ಹೊತ್ತು ನಡೆದರು.  ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ತಹಶೀಲ್ದಾರ್ ಎಸ್.ಸಂತೋಷ್ ಸಾಥ್ ನೀಡಿದರು. 

ಪಾಂಡವಪುರ ರೈಲ್ವೆ ನಿಲ್ದಾಣ, ಕೆನ್ನಾಳು, ಹರಳಹಳ್ಳಿ, ಪಾಂಡವಪುರ ಪಟ್ಟಣ, ಹಿರೇಮರಳಿ ಗೇಟ್, ಬನಘಟ್ಟ, ಕೆ.ಹೊಸೂರು ಗೇಟ್, ಇಂಗಲಗುಪ್ಪೆ ಛತ್ರ, ಮಹದೇಶ್ವರಪುರ, ನೀಲನಹಳ್ಳಿ ಗೇಟ್, ಬೆಳ್ಳಾಳೆ, ಮಾಣಿಕ್ಯನಹಳ್ಳಿ ಗೇಟ್, ಅಮೃತಿ, ನ್ಯಾಮನಹಳ್ಳಿ, ಜಕ್ಕನಹಳ್ಳಿ ಮೂಲಕ ಮೇಲುಕೋಟೆ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.