ADVERTISEMENT

‘ಶಿಕ್ಷಣ ಮೊಟಕುಗೊಳಿಸದಂತೆ ಎಚ್ಚರ ವಹಿಸಿ’

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಪೀರ್ ಸಮಿತಿ ಭೇಟಿ: ಸದಸ್ಯರ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 5:19 IST
Last Updated 25 ಜನವರಿ 2023, 5:19 IST
ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ಪೀರ್ ಸಮಿತಿ ಸದಸ್ಯರ ಜತೆ ಸಚಿವ ಕೆ.ಸಿ.ನಾರಾಯಣಗೌಡ ಚರ್ಚೆ ನಡೆಸಿದರು
ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ಪೀರ್ ಸಮಿತಿ ಸದಸ್ಯರ ಜತೆ ಸಚಿವ ಕೆ.ಸಿ.ನಾರಾಯಣಗೌಡ ಚರ್ಚೆ ನಡೆಸಿದರು   

ಕೆ.ಆರ್.ಪೇಟೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್‌ ಗ್ರೇಡ್‌ ನೀಡುವ ಸಂಬಂಧ ನ್ಯಾಕ್ ಸಮಿತಿಯ ಸದಸ್ಯರು ಮಂಗಳವಾರ ಭೇಟಿ ನೀಡಿ ಕಾಲೇಜಿನ ಪ್ರಗತಿ, ವಿದ್ಯಾರ್ಥಿಗಳ ಗುಣಮಟ್ಟ, ಮೂಲ ಸೌಲಭ್ಯಗಳ ಪರಿಶೀಲನೆ ನಡೆಸಿದರು.

ನ್ಯಾಕ್‌ ಪೀರ್‌ ಸಮಿತಿ ಸದಸ್ಯರಾದ ಉತ್ತರಪ್ರದೇಶದ ಮಗಧ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮೊಹಮದ್ಇಸ್ತೀಕ್, ಮಹಾರಾಷ್ಟ್ರದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವಸಂತರಾವ್ ಜುಗಾಲೆ, ತಮಿಳುನಾಡಿನ ಚೆನ್ನೈನ್‌ ನಝರತ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೇರಿಏಂಜೇಲಿನ ಸಂತೋಷಮ್ ಅವರನ್ನು ಸಚಿವ ನಾರಾಯಣಗೌಡ, ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ ಸ್ವಾಗತಿಸಿ ಕಾಲೇಜಿನ ಮಾಹಿತಿ ನೀಡಿದರು.

ಸಚಿವ ನಾರಾಯಣಗೌಡ ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ADVERTISEMENT

ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ ಮಾತನಾಡಿ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಾಗಿ 30 ವರ್ಷ ಆಗಿದೆ. ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು ಬಿಎ, ಬಿಎಸ್ಸಿ, ಬಿಬಿಎಂ, ಬಿಕಾಂ, ಬಿಎ ಪತ್ರಿಕೋದ್ಯಮ, ಎಂಎ, ಎಂಕಾಂ, ಎಂಎಸ್‌ಡಬ್ಲ್ಯೂ ವಿಭಾಗಗಳನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ನ್ಯಾಕ್ ಪೀರ್ ಸಮಿತಿ ಅಧ್ಯಕ್ಷ ಪ್ರೊ.ಮೊಹಮದ್ಇಸ್ತೀಕ್ ಮಾತನಾಡಿ, ಒಂದೂವರೆ ಸಾವಿರಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ವಿದ್ಯಾರ್ಥಿ
ಗಳು ಅಧ್ಯಯನ ಮಾಡುತ್ತಿರುವ ಕಾಲೇಜಿನ ಗುಣಮಟ್ಟದ ಅಧ್ಯಯನ ನಡೆಸಿ ಗ್ರೇಡ್ ನೀಡಲಿದ್ದೇವೆ.
ಕಾಲೇಜಿನ ಶೈಕ್ಷಣಿಕ ವಾತಾವರಣ ಚೆನ್ನಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು. ವಿದ್ಯಾರ್ಥಿ
ಗಳು ಅರ್ಧದಲ್ಲಿ ಶಿಕ್ಷಣ ಮೊಟಕುಗೊಳಿಸದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಉದ್ಯಮಿ ಅರವಿಂದಕಾರಂತ್, ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಸಿಬಿಸಿ ಸದಸ್ಯರಾದ ಕೆ.ಆರ್.ನೀಲಕಂಠ, ಎಚ್.ಆರ್.
ಲೋಕೇಶ್, ಹೊಸಹೊಳಲು ರಾಜು, ವಿಜಯಲಕ್ಷ್ಮೀ, ಚಂದ್ರಕಲಾ
ರಮೇಶ್, ಸಚಿವರ ಆಪ್ತಸಹಾಯಕ ದಯಾನಂದ, ಪ್ರಾಧ್ಯಾಪಕಿ
ಪೂರ್ಣಿಮಾ, ಡಾ.ಎಚ್.ಡಿ.ಉಮಾಶಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.