ADVERTISEMENT

ನಾಗಮಂಗಲ: ಜೂ.22 ಕ್ಕೆ ರಾಜ್ಯಮಟ್ಟದ ಕವಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಮೇ 2025, 8:33 IST
Last Updated 14 ಮೇ 2025, 8:33 IST
   

ನಾಗಮಂಗಲ: ‘ಪಟ್ಟಣ ಸಮೀಪದ ಗೆಳತಿಗುಡ್ಡದ ಪರಿಸರದಲ್ಲಿ ಭಾನುವಾರ (ಜೂ.22) ರಾಜ್ಯಮಟ್ಟದ ಕವಿ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಗೆಳತಿಗುಡ್ಡ ಪರಿಸರಕೂಟದ ಸದಸ್ಯರು ತಿಳಿಸಿದ್ದಾರೆ.

‘ಗೆಳತಿಗುಡ್ಡ ಪರಿಸರಕೂಟ, ಕನ್ನಡ ಸಂಘ, ಸಾಹಿತ್ಯ ಚಾವಡಿ ವತಿಯಿಂದ ಕಾವ್ಯರಚನೆ ಉತ್ತೇಜಿಸಲು ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಯ್ಕೆಯಾದ ಕವಿಗಳಿಂದ ಕವಿಗೋಷ್ಠಿ ಮತ್ತು ಸಂವಾದ ಇರಲಿದೆ. ಅಂದು ಬೆಳಿಗ್ಗೆ 9.30ರಿಂದ ಸಂಜೆ 5ಗಂಟೆವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಯ್ಕೆಯಾದ ಕವಿಗಳಿಗೆ ಪ್ರಯಾಣ ವೆಚ್ಚವನ್ನು ನೀಡಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಭಾಗವಹಿಸುವ ಕವಿಗಳು ಮೂರು ಕವನಗಳ ಪ್ರತಿಗಳನ್ನು ಕಳುಹಿಸಬೇಕು. ಅಂತಿಮವಾಗಿ 40 ಮಂದಿ ಆಯ್ಕೆ ಆಗಲಿದ್ದಾರೆ. ಕವನಗಳನ್ನು ಸ್ವೀಕರಿಸಲು ಮೇ 31ಕೊನೆಯ ದಿನ.

ADVERTISEMENT

ಕವನಗಳನ್ನು mdk053@gmail.com ಅಥವಾ prasad.nkn@gmail.com ಗೆ ಇಮೇಲ್ ಮಾಡಬಹುದು. ಜೀರಹಳ್ಳಿ ರಮೇಶಗೌಡ, ವಕೀಲರು, ಬಿಂಡಿಗನವಿಲೆ ರಸ್ತೆ, ಟಿ.ಬಿ. ಬಡಾವಣೆ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ- 571432 ಕಳುಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.