ಕಿಕ್ಕೇರಿ: ಜಾಗತಿಕ ಕೃಷಿ ಕ್ಷೇತ್ರದ ಸವಾಲು ಕುರಿತ 8ನೇ ಜಾಗತಿಕ ಸಮಾವೇಶ ದಕ್ಷಿಣ ಅಮೆರಿಕದ ಕೊಲಂಬಿಯಾ ದೇಶದ ರಾಜಧಾನಿ ಬೊಗೋಟಾದಲ್ಲಿ ಡಿ. 1ರಿಂದ 8ರವರೆಗೆ ನಡೆಯಲಿದ್ದು, ಮಂಡ್ಯ ಜಿಲ್ಲೆ ಪ್ರತಿನಿಧಿಯಾಗಿ ರಾಜ್ಯ ರೈತ ಸಂಘದ ಮಹಿಳಾ ಘಟಕ ಮಾಜಿ ರಾಜ್ಯಾಧ್ಯಕ್ಷೆ ಸಮೀಪದ ಚಿಕ್ಕಮಂದಗೆರೆ ಗ್ರಾಮದ ನಂದಿನಿ ಜಯರಾಂ ಭಾಗವಹಿಸಲಿದ್ದಾರೆ.
‘ಸಮಾವೇಶವನ್ನು ಜಾಗತಿಕ ರೈತ ಸಂಘಟನೆಗಳ ಒಕ್ಕೂಟ (ಎಲ್.ವಿ.ಸಿ.ಯು) ಸಂಘಟಿಸಿದ್ದು, ಜಗತ್ತಿನ 81 ದೇಶಗಳ 161 ರೈತ ಸಂಘಟನೆಗಳು ಭಾಗವಹಿಸಲಿವೆ. ಕಾರ್ಪೊರೇಟ್ ಕೃಷಿಗೆ ನಮ್ಮ ಸಾಂಪ್ರದಾಯಿಕ ಕೃಷಿಯು ಪರ್ಯಾಯವಾಗಿದೆ. ಕೃಷಿ ಹೆಜ್ಜೆ ಹೇಗಿರಬೇಕು ಎಂಬ ವಿಷಯವಾಗಿ ಚರ್ಚಿಸಲಾಗುವುದು’ ಎಂದು ನಂದಿನಿ ಜಯರಾಂ ತಿಳಿಸಿದ್ದಾರೆ.
ತಮ್ಮೊಂದಿಗೆ ಸಮಾವೇಶದಲ್ಲಿ ಚಾಮರಾಜನಗರದ ಚುಕ್ಕಿ ನಂಜುಂಡಸ್ವಾಮಿ, ಬೆಂಗಳೂರಿನ ಪ್ರೊ. ರವಿವರ್ಮ ಕುಮಾರ್, ಕೋಲಾರದ ನಳಿನಿ ಗೌಡ, ಮೈಸೂರಿನ ಮಂಜು ಕಿರಣ್, ಹಾವೇರಿಯ ಮಲ್ಲಿಕಾರ್ಜುನ ಬಳ್ಳಾರಿ, ಬೆಳಗಾವಿಯ ಪಾರ್ವತಿ ಕಲ್ಸಣ್ಣನವರ್, ಶಿವಮೊಗ್ಗದ ಅವಿನಾಶ್, ಅಮೃತಭೂಮಿಯಿಂದ ಅಂಬರೀಶ್ ಜೊತೆಗೆ ತರ್ಜುಮೆದಾರರಾಗಿ ಬಸವರಾಜ್ ಭಾಗವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.