ADVERTISEMENT

ಮಂಡ್ಯ: ಆನ್‌ಲೈನ್‌ನಲ್ಲೇ ಅರ್ಜಿ ನಿರ್ವಹಣೆ ಮಾಡಿ

ಜಿಲ್ಲಾಧಿಕಾರಿ ಕುಮಾರ ಅವರಿಂದ ಮಂಡ್ಯ ತಾಲ್ಲೂಕು ಕಚೇರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:18 IST
Last Updated 8 ಆಗಸ್ಟ್ 2025, 2:18 IST
ಮಂಡ್ಯ ತಾಲ್ಲೂಕು ಕಚೇರಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಕುಮಾರ ಅವರು ಕಡತಗಳನ್ನು ಪರಿಶೀಲಿಸಿದರು
ಮಂಡ್ಯ ತಾಲ್ಲೂಕು ಕಚೇರಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಕುಮಾರ ಅವರು ಕಡತಗಳನ್ನು ಪರಿಶೀಲಿಸಿದರು   

ಮಂಡ್ಯ: ಜಿಲ್ಲಾಧಿಕಾರಿ ಕುಮಾರ ಅವರು ಗುರುವಾರ ಮಂಡ್ಯ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಸೂಕ್ತ ಕ್ರಮ ವಹಿಸಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ತಾಲ್ಲೂಕು ಕಚೇರಿಯ ರೆಕಾರ್ಡ್ ರೂಮ್ ನಲ್ಲಿನ 1291 ಅರ್ಜಿಗಳಲ್ಲಿ 900 ಅರ್ಜಿಗಳನ್ನು ಮ್ಯಾನುಯಲ್ ಹಾಗೂ 300 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಣೆ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಯಾವುದೇ ಅರ್ಜಿಗಳನ್ನೂ ಮ್ಯಾನುವಲ್ ಆಗಿ ನಿರ್ವಹಣೆ ಮಾಡದಂತೆ ಕ್ರಮವಹಿಸಲು ಗ್ರೇಡ್ 2 ತಹಸಿಲ್ದಾರ್ ಮತ್ತು ಶಿರಸ್ತೇದಾರ್‌ಗೆ ಸೂಚನೆ ನೀಡಿದರು.

ADVERTISEMENT

ಟಪಾಲು ವಿಭಾಗದಲ್ಲಿ 224 ಅರ್ಜಿಗಳು ಇದ್ದು 172 ಅರ್ಜಿಗಳು 60 ದಿನಗಳ ಮೇಲ್ಪಟ್ಟ ಕಡತಗಳನ್ನು ಸಂಬಂಧಪಟ್ಟ ವಿಷಯ ನಿರ್ವಹಕರಿಗೆ ನೀಡಲು ಹಾಗೂ ನಿಗದಿತ ಸಮಯದಲ್ಲಿ ಕ್ರಮ ವಹಿಸುವ ಶಿರಸ್ತೇದಾರ್/ ಗ್ರೇಡ್ 2 ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ಸರ್ವೇ ಶಾಖೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ನಿಯಮಿತ ಕಾಲಾವಧಿಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.

ತಹಶೀಲ್ದಾರ್ ವಿಶ್ವನಾಥ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು. 

Highlights - ಕರ್ತವ್ಯದಲ್ಲಿ ವಿಳಂಬ ಧೋರಣೆ ಸಲ್ಲದು ಸಾರ್ವಜನಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ  ನಿಯಮಾನುಸಾರ ಸೌಲಭ್ಯ ಕಲ್ಪಿಸಿ 

Cut-off box - ‘ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿಗೊಳಿಸಿ’ ಅರ್ಜಿದಾರರಿಂದ ಇ– ಆಫೀಸ್ ನಲ್ಲಿ ಸ್ವೀಕೃತಗೊಂಡ ಕಡತಗಳನ್ನು ನಿಗದಿತ ಕಾಲ ಮಿತಿಯೊಳಗೆ ವಿಷಯ ನಿರ್ವಾಹಕರಿಗೆ ನೀಡಲು ಹಾಗೂ ಸೂಕ್ತ ಕ್ರಮ ವಹಿಸಲು ಜಿಲ್ಲಾಧಿಕಾರಿ ಕುಮಾರ ಸೂಚನೆ ನೀಡಿದರು. ಡಬ್ಲ್ಯೂ.ಪಿ 36 ಪ್ರಕರಣಗಳಿಗೆ ಕಂಡಿಕೆವಾರು ಉತ್ತರವನ್ನು ಸಿದ್ಧಪಡಿಸಲು ಕೆ.ಪಿ.ಎಲ್.ಸಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸೂಚನೆ ನೀಡಿದರು. ಕಚೇರಿಯ ಎಲ್ಲಾ ಶಿರಸ್ತೇದಾರ್ ಹಾಗೂ ವಿಷಯ ನಿರ್ವಾಹಕರಿಗೆ ನಿಗದಿತ ಕಾಲಮಿತಿಯೊಳಗೆ ಕಚೇರಿಗೆ ಬರುವ ಸಾರ್ವಜನಿಕ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ಕ್ರಮವಹಿಸಲು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.