ADVERTISEMENT

ಪಾಂಡವಪುರ: ‘ಕೃಷ್ಣೋತ್ಸವ’–ಹೆಣ್ಣು ಕರುಗಳ ಪ್ರದರ್ಶನ 12 ಕ್ಕೆ

ಚಿನಕುರಳಿ ಯ ರಾಮೇಶ್ವರ ಸಮುದಾಯದ ಭವನದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:13 IST
Last Updated 4 ಮಾರ್ಚ್ 2026, 6:13 IST
<div class="paragraphs"><p>ಪಾಂಡವಪುರ ಮನ್‌ಮುಲ್ ಉಪ ಕಚೇರಿಯಲ್ಲಿ ಹಾಲು ಉತ್ಪಾದಕರಿಗೆ ‍ಮನ್‌ಮುಲ್‌ ನಿರ್ದೇಶಕ ಸಿ.ಶಿವಕುಮಾರ್&nbsp; ಪರಿಹಾರದ ಚೆಕ್ ವಿತರಣೆ ಮಾಡಿದರು.</p></div>

ಪಾಂಡವಪುರ ಮನ್‌ಮುಲ್ ಉಪ ಕಚೇರಿಯಲ್ಲಿ ಹಾಲು ಉತ್ಪಾದಕರಿಗೆ ‍ಮನ್‌ಮುಲ್‌ ನಿರ್ದೇಶಕ ಸಿ.ಶಿವಕುಮಾರ್  ಪರಿಹಾರದ ಚೆಕ್ ವಿತರಣೆ ಮಾಡಿದರು.

   

ಪಾಂಡವಪುರ: ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಮಾರ್ಚ್‌ 12ರಂದು ‘ಕೃಷ್ಣೋತ್ಸವ–ತಾಲ್ಲೂಕು ಮಟ್ಟದ ಹೆಣ್ಣು ಕರುಗಳ ಪ್ರದರ್ಶನ’ಆಯೋಜಿಸಲಾಗಿದೆ ಎಂದು ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ತಿಳಿಸಿದರು.

ಪಟ್ಟಣದ ಮನ್‌ಮುಲ್ ಉಪ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ, ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಗೆಜ್ಜಲಗೆರೆ, ಚಿನಕುರಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಶ್ರಯದಲ್ಲಿ ಗ್ರಾಮದ ರಾಮೇಶ್ವರ ಸಮುದಾಯದ ಭವನದಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ ಎಂದರು.

ADVERTISEMENT

ಹೆಣ್ಣುಕರುಗಳ ಸಂತತಿ ಉಳಿವು ಮತ್ತು ಬೆಳವಣಿಗೆಯ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಹಾಲು ಉತ್ಪಾದಕರು ಕಡ್ಡಾಯವಾಗಿ ಮಾರ್ಚ್‌ 7ರೊಳಗೆ ತಮ್ಮ  ವ್ಯಾಪ್ತಿಯ ಸಂಘದಲ್ಲಿ ನೋಂದಣಿ ಮಾಡಿಸಿದ  ಸಕ್ರಿಯ ಉತ್ಪಾದಕರಿಗೆ ಮಾತ್ರ ಸ್ಪರ್ಧೆಯಲ್ಲಿ ಅವಕಾಶವಿರುತ್ತದೆ.   ಗಂಡು ಕರುಗಳಿಗೆ ಸ್ಪರ್ಧೆಯಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸುವ ಕರುಗಳನ್ನು ಎಚ್‌.ಎಫ್‌, ಜರ್ಸಿ, ಎಮ್ಮೆ, ಹಳ್ಳಿಕಾರ್ (ಪ್ರತ್ಯೇಕ) ಪ್ರತ್ಯೇಕಿಸಲಾಗಿದೆ ವಿಜೇತ ತಳಿಯ ಕರುಗಳಿಗೆ ಪ್ರಥಮ ಮತ್ತು ದ್ವೀತಿಯ ಆಕರ್ಷಕ ಬಹುಮಾನ ನೀಡಲಾಗುವುದಲ್ಲದೆ, ಕರುಗಳಿಗೆ ವಿಶೇಷ ಕಿಟ್ ನೀಡಲಾಗುವುದು ಎಂದು ಹೇಳಿದರು.

ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕೆಎಂಎಫ್‌ ನಿರ್ದೇಶಕ ಎನ್.ಅಪ್ಪಾಜಿಗೌಡ, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪರಿಹಾರ ಚೆಕ್ ವಿತರಣೆ: ರಾಸುಗಳಿಗೆ ವಿಮೆ ಸೌಲಭ್ಯ ಪರಿಹಾರ, ಮರಣ ಪರಿಹಾ ನಿಧಿ, ಹಾಲು ಕರೆಯುವ ಯಂತ್ರ, ಡೇರಿ ಕಟ್ಟಡ ನಿರ್ಮಾಣಕ್ಕೆ ಪ್ರೋತ್ಸಾಹ ಧನ, ವಿವಿಧ ಸೌಲಭ್ಯಕ್ಕೆ ₹ 25ಲಕ್ಷಕ್ಕೂ ಹೆಚ್ಚು ಪರಿಹಾರದ ಚೆಕ್‌ಗಳನ್ನು ರೈತರಿಗೆ ವಿತರಿಸಲಾಯಿತು.

ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಹಾಲು ಉತ್ಪಾದಕರಿಗೆ  ₹3ಕೋಟಿ ಪರಿಹಾರದ ಚೆಕ್ ವಿತರಿಸಲಾಗಿದೆ. ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ 12 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ  ಎಂದು ತಿಳಿಸಿದರು.
ಮನ್‌ಮುಲ್ ಉಪ ವ್ಯವಸ್ಥಾಪಕ ಡಾ.ಪ್ರಸಾದ್, ತಾಲ್ಲೂಕು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಶಿವಪ್ಪ, ನಿರ್ದೇಶಕ ನಟರಾಜು, ಪಶು ವೈದ್ಯರಾದ ಡಾ.ಪ್ರಕಾಶ್, ಡಾ.ಸಂತೋಷ್, ಮಾರ್ಗ ವಿಸ್ತರಣಾಧಿಕಾರಿಗಳಾದ ಉಷಾ, ಪ್ರಜ್ವಲ್, ನಾಗೇಂದ್ರ, ಮಧು ಶಂಕರ್ ಇದ್ದರು.

ವಿಮೆ ಮಾಡಿಸಲು ಮನವಿ

‘ಸಕ್ರಿಯವಾಗಿ ಡೇರಿಗೆ ಹಾಲು ಸರಬರಾಜು ಮಾಡುವವರಿಗೆ ₹200 ವಿಮೆ ಹಾಗೂ ಸರಬರಾಜು ಮಾಡದ ಡೇರಿ ಸದಸ್ಯರಿಗೆ ₹ 400 ವಿಮೆಗೆ ಮೊತ್ತ ನಿಗದಿ ಮಾಡಲಾಗಿದೆ. ತಾಲ್ಲೂಕಿನಲ್ಲಿ 1 ಲಕ್ಷ ಮಂದಿ ಹಾಲು ಸರಬರಾಜು ಮಾಡುವ ರೈತರಿದ್ದಾರೆ. 18 ಸಾವಿರ ರಾಸುಗಳಿವೆ. 9 ಸಾವಿರ ರಾಸುಗಳಿಗೆ ಮಾತ್ರ ವಿಮೆ ಮಾಡಿಸಲಾಗಿದೆ ’ ಎಂದು ಮನ್‌ಮುಲ್ ಉಪ ಕಚೇರಿ  ಉಪ ವ್ಯವಸ್ಥಾಪಕ  ಡಾ.ಪ್ರಸಾದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.