
ಪಾಂಡವಪುರ: ಶರಣ ಮಡಿವಾಳ ಮಾಚಯ್ಯನವರು ಹಲವು ವಚನಗಳನ್ನು ರಚಿಸಿ ವಚನ ಸಾಹಿತ್ಯ ಬೆಳೆಯುವಂತೆ ಮಾಡಿದ್ದಾರೆ ಎಂದು ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಹೇಳಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಮಡಿವಾಳ ಮಾಚೀದೇವರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲ್ಯಾಣ ಕ್ರಾಂತಿಯ ವೇಳೆ ಪುರೋಹಿತಶಾಹಿಯು ವಚನ ಸಾಹಿತ್ಯವನ್ನು ನಾಶಗೊಳಿಸಲು ಮುಂದಾದಾಗ ಶರಣ ಮಡಿವಾಳ ಮಾಚಯ್ಯನವರು ಹೋರಾಟ ಮಾಡಿ ವಚನ ಸಾಹಿತ್ಯಗಳನ್ನು ರಕ್ಷಣೆ ಮಾಡಿದ ಮಹಾನ್ ಶರಣರಾಗಿದ್ದಾರೆ. ಇಂತಹ ಶರಣರ ಚಿಂತನೆ ಮತ್ತು ಹೋರಾಟ ನಮ್ಮೆಲ್ಲರಿಗೂ ದಾರಿದೀಪವಾಗಬೇಕಿದೆ ಎಂದರು.
ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಸಂದೇಶ್ ಮಾತನಾಡಿದರು.
ಇದೇ ವೇಳೆ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಣೆ ಮಾಡಲಾಯಿತು.
ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ರವಿ, ರಾಜ್ಯ ನಿರ್ದೇಶಕಿ ಪದ್ಮಾವತಿ, ತಾಲ್ಲೂಕು ಅಧ್ಯಕ್ಷ ಹರಳಹಳ್ಳಿ ರಾಮಚಂದ್ರು, ವೀರಶೈವ ಮುಖಂಡರಾದ ಎಂ.ಬೆಟ್ಟಹಳ್ಳಿ ಮಂಜುನಾಥ್, ದ್ಯಾವಪ್ಪ, ಮೈಸೂರು ಬೃಂದಾವನ ಭಾಗದ ಮಡಿವಾಳ ಸಂಘದ ಅಧ್ಯಕ್ಷ ಮಹೇಶ್, ಮುಖಂಡರಾದ ಸಿದ್ದಶೆಟ್ಟಿ, ಮಹದೇವು, ರಘು, ಶಿವಕುಮಾರ್, ರಂಗಶೆಟ್ಟಿ, ಅರುಣ್, ಇಂದೂಧರ್, ಮಾದಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.