ADVERTISEMENT

ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ | ನ್ಯಾಯಾಲಯದ ತೀರ್ಪು ಗೌರವಿಸುತ್ತೇನೆ: ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 4:17 IST
Last Updated 3 ಆಗಸ್ಟ್ 2025, 4:17 IST
<div class="paragraphs"><p>ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ವಿದ್ಯಾಸಂಸ್ಥೆಯ ಪ್ರಯೋಗ ಸಂಸ್ಥೆಯು ನಿರ್ಮಿಸಿರುವ ವಿಜ್ಞಾನ ಪ್ರಯೋಗಲಯವನ್ನು ರಾಮನಗರ ಸಂಸದ ಡಾ.ಮಂಜುನಾಥ್ ಉದ್ಘಾಟಿಸಿದರು.&nbsp;</p></div>

ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ವಿದ್ಯಾಸಂಸ್ಥೆಯ ಪ್ರಯೋಗ ಸಂಸ್ಥೆಯು ನಿರ್ಮಿಸಿರುವ ವಿಜ್ಞಾನ ಪ್ರಯೋಗಲಯವನ್ನು ರಾಮನಗರ ಸಂಸದ ಡಾ.ಮಂಜುನಾಥ್ ಉದ್ಘಾಟಿಸಿದರು. 

   

ಮದ್ದೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದ್ದು, ಈ ತೀರ್ಪನ್ನು ಗೌರವಿಸುವುದಾಗಿ ಸಂಸದ ಸಿ.ಎನ್‌. ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ಸೋಮನಹಳ್ಳಿಯ ವಿದ್ಯಾಸಂಸ್ಥೆಯ ಪ್ರಯೋಗ ಸಂಸ್ಥೆಯು ನಿರ್ಮಿಸಿರುವ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. 

ADVERTISEMENT

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಒಂದು ವೇಳೆ ನಡೆದಿದ್ದರೆ ಯುಪಿಎ ಇಷ್ಟೊಂದು ಸ್ಥಾನಗಳನ್ನು ಹೇಗೆ ಗಳಿಸಲು ಸಾಧ್ಯವಾಗುತ್ತಿತ್ತು. ಅವರ ಆರೋಪ ಸತ್ಯಕ್ಕೆ ದೂರವಾಗಿದೆ. ನನ್ನನ್ನು ಕ್ಷೇತ್ರದ ಜನತೆ 2 ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿದ್ದಾರೆ ಎಂಬುದನ್ನು ಬುದ್ಧಿ ಇದ್ದವರು ಅರಿತುಕೊಂಡಿದ್ದರೆ ಹೀಗೆ ಆರೋಪ ಮಾಡುತ್ತಿರಲಿಲ್ಲ. ಅವರಿಗೆ (ಕಾಂಗ್ರೆಸ್‌) ಹೆಚ್ಚು ಸ್ಥಾನ ಬರದಿದ್ದಾಗ ಇವಿಎಂ ಯಂತ್ರಗಳು ಸರಿಯಿಲ್ಲ ಎಂದು ಆರೋಪ ಮಾಡಿದ್ದರು’ ಎಂದು ಕುಟುಕಿದರು.

ನಂತರ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿ, ಕೆಂಗಲ್ ಹನುಮಂತಯ್ಯ, ಎಸ್.ಎಂ. ಕೃಷ್ಣ ಅವರಂತಹ ಮಹಾನ್ ವ್ಯಕ್ತಿಗಳು ವಿದ್ಯಾಭ್ಯಾಸ ಮಾಡಿದ ಮದ್ದೂರು ಬಳಿಯ ಸೋಮನಹಳ್ಳಿ ವಿದ್ಯಾಸಂಸ್ಥೆಯಲ್ಲಿ ಕರಣ್ ಅವರು ಆಸಕ್ತಿಯಿಂದ ಸುಸಜ್ಜಿತ ವಿಜ್ಞಾನ ಪ್ರಯೋಗಶಾಲೆಯನ್ನು ‌ಆರಂಭಿಸಿರುವುದು ಸ್ವಾಗತಾರ್ಹ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಕರಣ್, ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸ್ವಾಮೀಜಿ, ಸಂಸ್ಥೆಯ ಆಡಳಿತಾಧಿಕಾರಿ ಶಿವರಾಮೇಗೌಡ, ಡಾ. ನಾಗರಾಜ, ಟಿ.ವಿ.ರಾಜು, ಡಾ.ಆನಂದ, ಡಾ.ವಿಷ್ಣುಕಾಂತ್, ಮುರಳಿಮೋಹನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.