ನಾಗಮಂಗಲ: ತಾಲ್ಲೂಕಿನ ಬೆಳ್ಳೂರು ಹೋಬಳಿ ಸೇರಿ ವಿವಿಧೆಡೆ ಸೋಮವಾರ ಮಳೆ ಸುರಿಯಿತು.
ಪಟ್ಟಣದಲ್ಲಿ ಸೋನೆ ಮಳೆಯಾಗಿದ್ದು, ಬೆಳ್ಳೂರು ಕ್ರಾಸ್ ವ್ಯಾಪ್ತಿಯಲ್ಲಿ ಮಧ್ಯಾಹ್ನ 12.45ರ ನಂತರ ಸೋನೆ ಮಳೆ ಆರಂಭವಾಗಿ ಕೆಲ ನಿಮಿಷದ ನಂತರ ಬಿರುಸು ಪಡೆದುಕೊಂಡು ಒಂದು ಗಂಟೆಗೂ ಹೆಚ್ಚು ಕಾಲ ಜೋರಾಗಿ ಸುರಿಯಿತು.
ಮಧ್ಯಾಹ್ನವೇ ಮಳೆ ಸುರಿದಿದ್ದರಿಂದ ವ್ಯಾಪಾರಿಗಳು ಪರದಾಡಿದರು. ಜೊತೆಗೆ ಬೆಳ್ಳೂರು ಕ್ರಾಸ್ ವ್ಯಾಪ್ತಿಯ ಬಿ.ಜಿ. ನಗರ, ಜವರನಹಳ್ಳಿ, ನೆಲ್ಲೀಗೆರೆ, ಚಾಮಲಾಪುರ, ಮಾರುತಿಪುರ, ಅಗಚಹಳ್ಳಿ, ಹೊಸಮನೆ, ಯಾಲಾದಳ್ಳಿ, ತಿರುಮಲಾಪುರ, ಕದಬಹಳ್ಳಿ, ನಾಗತಿಹಳ್ಳಿ, ಚಾಮನಕೊಪ್ಪಲು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.