
ಹಲಗೂರು: ಒತ್ತಡದ ಜೀವನದಲ್ಲಿ ದೇವರ ಸ್ತೋತ್ರಗಳನ್ನು ಪಠಿಸಿದರೇ, ಶಾಂತಿ ಮತ್ತು ನೆಮ್ಮದಿ ಲಭಿಸುವ ಜೊತೆಗೆ ಮನಸ್ಸು ಉಲ್ಲಾಸಗೊಳ್ಳತ್ತದೆ ಎಂದು ವೀರಶೈವ ಮಹಿಳಾ ಸಮಾಜದ ಸುಶೀಲಮ್ಮ ತಿಳಿಸಿದರು.
ಹಲಗೂರಿನ ಮಠದ ಬೀದಿಯಲ್ಲಿರುವ ಬೃಹನ್ಮಠದಲ್ಲಿ ವೀರಶೈವ ಮಹಿಳಾ ಸಮಾಜದ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಲಲಿತ ಸಹಸ್ರನಾಮ ಪಾರಾಯಣ ಪಠಣ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕವಿತಾ ಮಾತನಾಡಿ, ‘ಬಡಾವಣೆಯ ನಿವಾಸಿಗಳಲ್ಲಿ ಲಲಿತ ಸಹಸ್ರನಾಮ ಕಲಿಯುವ ಮಹತ್ವಾಕಾಂಕ್ಷೆ ಇತ್ತು. ಇದರಿಂದಾಗಿ ಸಮಾನ ಮನಸ್ಕ ಮಹಿಳೆಯರು ಸಂಘ ಸ್ಥಾಪಿಸಿಕೊಂಡು ಕಳೆದ 15 ದಿನಗಳಿಂದ ಪಾರಾಯಣ ಜಪ ಮಾಡಿದೆವು. ಸದಾ ಭಕ್ತಿಯಿಂದ ಕಲಿತರೆ ಮನಃಶಾಂತಿ ಸಿಗಲಿದೆ. ಮಾನಸಿಕ ಒತ್ತಡ ನಿವಾರಣೆಗೆ ಲಲಿತ ಸಹಸ್ರನಾಮ ಸಹಕಾರಿಯಾಗಲಿದೆ’ ಎಂದರು.
ವೀರಶೈವ ಮಹಿಳಾ ಸಮಾಜದ ವತಿಯಿಂದ ಗುಣಶೀಲಾ, ಶಾರದ, ಲಕ್ಷ್ಮೀ, ಉಮಾ ಮಹೇಶ್ವರಿ, ಟಿ.ವಿಜಯ ಇವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮಹಿಳಾ ಸಮಾಜದ ಪ್ರಮುಖರಾದ ಸುಶೀಲಾ, ವೀಣಾ, ಕವಿತಾ, ಮಮತರಾಣಿ, ಶಾಲಿನಿ, ನಾಗರತ್ನ, ರೇಣುಕಾ, ವನಜಾಕ್ಷಮ್ಮ, ಲತಾ, ಜಗದಾಂಬ, ರೂಪ, ವಿದ್ಯಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.