ADVERTISEMENT

ಸಿದ್ದರಾಮಯ್ಯ ಹೇಳಿಕೆಯಿಂದ ಧರ್ಮ ಸಂಘರ್ಷ: ಸಚಿವ ಆರ್. ಅಶೋಕ್‌

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 14:46 IST
Last Updated 2 ಡಿಸೆಂಬರ್ 2020, 14:46 IST
ಸಚಿವ ಆರ್. ಅಶೋಕ್
ಸಚಿವ ಆರ್. ಅಶೋಕ್   

ಕೆ.ಆರ್‌.ಪೇಟೆ (ಮಂಡ್ಯ ಜಿಲ್ಲೆ): ‘ಹಿಂದೂ–ಮುಸ್ಲಿಂ ಕ್ರಾಸ್‌ ಬ್ರೀಡ್‌ ಹೇಳಿಕೆ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಗಳ ನಡುವೆ ಸಂಘರ್ಷ ತಂದಿಡಲು ಮುಂದಾಗಿದ್ದಾರೆ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಬುಧವಾರ ಇಲ್ಲಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಲವ್‌ ಜಿಹಾದ್‌ ನಿಷೇಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾರೇ ಆಗಲಿ, ಲವ್‌ ಜಿಹಾದ್ ನಡೆಸಿದರೆ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕುತ್ತೇವೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅಲ್ಪ ಸಂಖ್ಯಾತರ ಓಟಿಗಾಗಿ ಕ್ರಾಸ್‌ಬ್ರೀಡ್‌ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿಯವರೆಗೆ ಪ್ರಾಣಿಗಳ ಕ್ರಾಸ್‌ಬ್ರೀಡ್‌ ಕೇಳಿದ್ದೆವು. ಈಗ ಮನುಷ್ಯರ ಕ್ರಾಸ್‌ಬ್ರೀಡ್‌ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಸಂಘರ್ಷಕ್ಕೆ ಕಾರಣವಾಗುತ್ತದೆ’ ಎಂದರು.

‘ಪ್ರೀತಿಸಿ ಮದುವೆಯಾಗಿ ಒಂದು ವರ್ಷದಲ್ಲಿ ಮತ್ತೆ ಮೂರು ಮದುವೆಯಾದರೆ ಅದನ್ನು ಪ್ರೀತಿ ಎನ್ನಲು ಸಾಧ್ಯವಿಲ್ಲ. ಕೇರಳದಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಮದುವೆಯಾದವರಿಗೆ ₹ 2 ಲಕ್ಷ ಬಹುಮಾನ ನೀಡುತ್ತಾರೆ. ಲವ್‌ ಜಿಹಾದ್‌ ನಿಷೇಧಿಸಲು ಬಿಡುವುದಿಲ್ಲ ಎಂದು ಹೇಳಲು ಸಿದ್ದರಾಮಯ್ಯ ಯಾರು’ ಎಂದು ಪ್ರಶ್ನಿಸಿದರು.

ADVERTISEMENT

‘ಸಿ.ಪಿ.ಯೋಗೇಶ್ವರ್‌ ಅವರಿಗೆ ಮಂತ್ರಿ ಪದವಿ ನೀಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಕೇಂದ್ರದ ವರಿಷ್ಠರು ನಿರ್ಧರಿಸುತ್ತಾರೆ. ಕೇಳಿದ ತಕ್ಷಣವೇ ಯಾರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ, ಹೈಕಮಾಂಡ್‌ ಒಪ್ಪಿಗೆಯ ನಂತರವೇ ಪ್ರಕ್ರಿಯೆ ನಡೆಯಲಿದೆ’ ಎಂದರು.

‘ಎಚ್‌.ವಿಶ್ವನಾಥ್‌ ಒಬ್ಬಂಟಿಯಲ್ಲ, ಅವರ ಜೊತೆ ಬಿಜೆಪಿ ಮುಖಂಡರೆಲ್ಲರೂ ಸಂಪರ್ಕದಲ್ಲಿ ಇದ್ದೇವೆ. ಸಚಿವ ಸ್ಥಾನದ ಕುರಿತು ಸುಪ್ರೀಂ ಕೋರ್ಟ್‌ಗೆ ಅಪೀಲು ಸಲ್ಲಿಸಲಾಗಿದೆ. ಅವರಿಗೆ ನ್ಯಾಯ ದೊರಕುವಂತೆ ಮಾಡುತ್ತೇವೆ. ಅವರ ವಿರುದ್ಧ ಶಾಸಕ ಸಾ.ರಾ.ಮಹೇಶ್‌ ಟೀಕೆ ಮಾಡುತ್ತಿರುವುದು ತಪ್ಪು’ ಎಂದರು. ‘ಈಗ ಜೆಡಿಎಸ್‌ ಖಾಲಿಯಾಗಿದೆ, ಗ್ರಾಮ ಒಂಪಾಯಿತಿ ಚುನಾವಣೆಯಲ್ಲಿ ಸ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.