ADVERTISEMENT

ಸಂತೇಬಾಚಹಳ್ಳಿ | ಮದ್ಯ ಅಕ್ರಮ ದಾಸ್ತಾನು: ವಶ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:25 IST
Last Updated 31 ಮಾರ್ಚ್ 2024, 15:25 IST
ಸಂತೇಬಾಚಹಳ್ಳಿ ಹೋಬಳಿಯ ಚೋಟ್ಟನಹಳ್ಳಿ ಗೇಟ್ ಬಳಿ ಅಕ್ರಮ  ಸಂಗ್ರಹಿಸಲಾಗಿದ್ದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದರು.
ಸಂತೇಬಾಚಹಳ್ಳಿ ಹೋಬಳಿಯ ಚೋಟ್ಟನಹಳ್ಳಿ ಗೇಟ್ ಬಳಿ ಅಕ್ರಮ  ಸಂಗ್ರಹಿಸಲಾಗಿದ್ದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದರು.   

ಸಂತೇಬಾಚಹಳ್ಳಿ: ಚೋಟ್ಟನಹಳ್ಳಿ ಗೇಟ್ ಬಳಿಯ ಪೆಟ್ಟಿಗೆ ಅಂಗಡಿಯಲ್ಲಿ ಅಕ್ರಮ ದಾಸ್ತಾನಿರಿಸಿದ್ದ ₹25,000 ಮೌಲ್ಯದ ಸುಮಾರು 58 ಲೀಟರ್ ಮದ್ಯವನ್ನು ಪಟ್ಟಣ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಂಗಡಿಯಲ್ಲಿ ವಿವಿಧ ನಮೂನೆಯ ಮದ್ಯವನ್ನು ಅಕ್ರಮ ಮಾರಾಟ ಮಾಡಲು ಸಂಗ್ರಹ ಮಾಡಿರುವ ವಿಷಯ ತಿಳಿದು ಇನ್‌ಸ್ಪೆಕ್ಟರ್ ಸುಮರಾಣಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಪ್ರಕರಣ ದಾಖಲಾಗಿದೆ.

ಲೋಕಸಭಾ ಚುನಾವಣೆ ಇರುವ ಕಾರಣ ತಾಲ್ಲೂಕಿನಲ್ಲಿ ಮದ್ಯ ಅಕ್ರಮ  ಶೇಖರಣೆ ಮಾಡುವ ಸಂಭವವಿದೆ. ಸಾರ್ವಜನಿಕರು  ಠಾಣೆಗೆ ಮಾಹಿತಿ ನೀಡಬೇಕು. ಕೃತ್ಯ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ.  ಎಂು ಸುಮರಾಣಿ  ಹೇಳಿದರು.

ADVERTISEMENT

ಠಾಣಾ ಸಿಬ್ಬಂದಿ ಮಹೇಶ್, ಉಮೇಶ್, ಪ್ರದೀಪ್, ಮಂಜು, ಅವಿನಾಶ್,ಮನು ಕುಮಾರ್ , ಹರೀಶ್ ಇದ್ದರು.

ಸುಮರಾಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.