ADVERTISEMENT

ವಿಜ್ಞಾನ ಮೇಳ: ಮಕ್ಕಳಿಗೆ ₹ 3 ಲಕ್ಷ ಬಹುಮಾನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 12:42 IST
Last Updated 3 ಫೆಬ್ರುವರಿ 2023, 12:42 IST
ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ಬಹುಮಾನ ಪಡೆದ ಬಸರಾಳು ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ ಮಕ್ಕಳ ಜೊತೆ ಶಿಕ್ಷಕರು, ಸಿಬ್ಬಂದಿ ಇದ್ದಾರೆ
ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ಬಹುಮಾನ ಪಡೆದ ಬಸರಾಳು ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ ಮಕ್ಕಳ ಜೊತೆ ಶಿಕ್ಷಕರು, ಸಿಬ್ಬಂದಿ ಇದ್ದಾರೆ   

ಮಂಡ್ಯ: ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಈಚೆಗೆ ನಡೆದ ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ತಾಲ್ಲೂಕಿನ ಬಸರಾಳು ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ ಮಕ್ಕಳು ಪ್ರಥಮ ಬಹುಮಾನ ಪಡೆದಿದ್ದಾರೆ.

ವಿಜೇತ ಮಕ್ಕಳಿಗೆ ₹ 3 ಲಕ್ಷ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಗಿದೆ. 9ನೇ ತರಗತಿ ವಿದ್ಯಾರ್ಥಿಗಳಾದ ಪ್ರಿಯಾ, ಸಿ.ಕೆ.ಮೌಲ್ಯ, 8ನೇ ತರಗತಿ ವಿದ್ಯಾರ್ಥಿಗಳಾದ ಯಶಸ್ವಿನಿ, ಚಿತ್ರಶ್ರೀ, ನವ್ಯಶ್ರೀ ಬಹುಮಾನ ಪಡೆದಿದ್ದಾರೆ. ರಚನಾತ್ಮಕ ಮತ್ತು ಪ್ರವಾಹ ನಿಯಂತ್ರಣ (ಸಸ್ಟೇನಬಲ್‌ ಅಂಡ್‌ ಫ್ಲಡ್‌ ಮ್ಯಾನೇಜ್‌ಮೆಂಟ್‌) ಪ್ರಾತ್ಯಕ್ಷಿಕೆಗೆ ಬಹುಮಾನ ಬಂದಿದೆ.

ಬಹುಮಾನ ಪಡೆದ ಮಕ್ಕಳನ್ನು ಶಾಲೆಯ ಪ್ರಾಚಾರ್ಯರಾದ ಎಚ್‌.ಬಿ.ಪುರುಷೋತ್ತಮ, ಮಾರ್ಗದರ್ಶಿ ಶಿಕ್ಷಕ ರವಿಕುಮಾರ್‌, ಭಾರ್ಗವಿ ಹಾಗೂ ಶಾಲೆಯ ಸಿಬ್ಬಂದಿ ಅಭಿನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.