ಮೇಲುಕೋಟೆ: ಮೈಸೂರು ಮನೆತನದ ಕುಲದೈವ ಶ್ರೀಚೆಲುವನಾರಾಯಣಸ್ವಾಮಿ ಯಸನ್ನಿಧಿಯಲ್ಲಿ ಮಹಾಲಕ್ಷ್ಮೀ ಕಲ್ಯಾಣನಾಯಕಿದೇವಿಗೆ ನಡೆದ ಬಂಗಾರದ ಶೇಷವಾಹನೋತ್ಸವದೊಂದಿಗೆ ಸೋಮವಾರ ನವರಾತ್ರಿ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.
ದೇವಿ ಮೂರ್ತಿಯನ್ನು ಅಲಂಕರಿಸಿ ಬಂಗಾರದ ಶೇಷವಾಹನೋತ್ಸವ, ಪಲ್ಲಕಿ ಉತ್ಸವಇಲ್ಲಿನ ರಾಜಬೀದಿಯಲ್ಲಿ ವೈಭವದಿಂದ ಜರುಗಿತು.
ನವರಾತ್ರಿ ಅಂಗವಾಗಿ ಪ್ರತಿದಿನ ಬೆಳಗ್ಗೆ 6.30ಕ್ಕೆ ನಿತ್ಯಪೂಜೆ, 11 ಗಂಟೆಗೆ ಕಲ್ಯಾಣನಾಯಕಿ ದೇವಿಗೆ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ , ಅಲಂಕೃತ ಕಲ್ಯಾಣಿತಾಯಿಗೆ ಬಂಗಾರದ ಶೇಷವಾಹನೋತ್ಸವ , ಪ್ರಬಂಧ ಪಾರಾಯಣ ಹಾಗೂ ಮಂಗಳ ವಾದ್ಯಗಳೊಂದಿಗೆ ಉತ್ಸವ ನಡೆಯಲಿದೆ.
ಚೆಲುವನಾರಾಯಣಸ್ವಾಮಿಗೆ ಅ.2ರ ವಿಜಯದಶಮಿಯಂದು ಮಹಾರಾಜರ ಅಲಂಕಾರ ನೆರವೇರಿಸಲಾಗುತ್ತದೆ. ಸಂಜೆ ಸ್ವಾಮಿಗೆ ಅಶ್ವವಾಹನದ ಜಂಬೂಸವಾರಿ ಬನ್ನಿಪೂಜೆ, ವಿಜಯೋತ್ಸವ ಮೆರವಣಿಗೆ ನಡೆಯಲಿದೆ.
ನವರಾತ್ರಿ ಬಗ್ಗೆ ಮಾಹಿತಿ ನೀಡಿದ ದೇಗುಲದ ಇಒ ಶೀಲಾ , ಚೆಲುವನಾರಾಯಣಸ್ವಾಮಿ ದೇವಾಲಯದ ರಾಜಗೋಪುರ ಮತ್ತು ರಾಜಬೀದಿಗೆ ಸರಳ ದೀಪಾಲಂಕಾರ ಮಹಾಲಕ್ಷ್ಮಿ ಕಲ್ಯಾಣನಾಯಕಿಗೆ ಗೆ 9 ದಿನ ವಿಶೇಷ ತೋಮಾಲೆ ಮಂಗಳವಾದ್ಯ ವ್ಯವಸ್ಥೆ ಮಾಡಲಾಗಿದೆ. ವಿಜಯದಶಮಿ ಅಚ್ಚುಕಟ್ಟಾಗಿ ನಡೆಸಲು ಪಾರುಪತ್ತೇಗಾರರಿಗೆ ಸೂಚಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.