ಮಂಡ್ಯ: ರಾಜ್ಯ ಸರ್ಕಾರಕ್ಕೆ ಮೈಷುಗರ್ ಕಾರ್ಖಾನೆ ಆರಂಭಿಸಲು ಮನಸ್ಸಿಲ್ಲ. ಕಾರ್ಖಾನೆಯನ್ನುರೋಗಗ್ರಸ್ತ ಮಾಡಿದ್ದು ಬಿಜೆಪಿ ಸರ್ಕಾರ. ಯಡಿಯೂರಪ್ಪ ಅವರು ಜಿಲ್ಲೆಯವರೇ ಆಗಿದ್ದರೂ ಕಾರ್ಖಾನೆ ಆರಂಭಿಸುವಲ್ಲಿ ಕೈ ಎತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದರು.
ನಗರದ ಸರ್ ಎಂ.ವಿ.ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ಆರಂಭವಾಗಿರುವ ಅನಿರ್ದಿಷ್ಟಾವಧಿ ಧರಣಿ 28 ದಿನ ಪೂರೈ ಸಿದ್ದು, ಧರಣಿಗೆ ಬೆಂಬಲ ನೀಡಿ, ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಖಾನೆಯನ್ನು ಸರಿಯಾಗಿ ನಿರ್ವಹಣೆ ಮಾಡದೇ ನಷ್ಟವಾಗಿ ದೆಯೇ ಹೊರತು ರೈತರನ್ನು ಹೊಣೆಗಾ ರರನ್ನಾಗಿಸಲಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಬಂದ ಎರಡು ತಿಂಗಳೊಳಗೆ ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ಆರಂಭಿಸಲಾಗುವುದು ಎಂದರು.
‘ನಮ್ಮ ಸರ್ಕಾರ ಇದ್ದಾಗ ₹ 145 ಕೊಟಿ ರೂಪಾಯಿಯನ್ನು ಮೈಷುಗರ್ ಪುನಶ್ಚೇತನಕ್ಕೆ ಕೊಟ್ಟು, ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ಆರಂಭಿಸ ಲಾಗಿತ್ತು. ಇದು ಬಹಳಷ್ಟು ಆಸ್ತಿ ಹೊಂದಿರುವ ಸ್ವಾವಂಲಂಬಿ ಕಾರ್ಖಾನೆ. ಸರಿಯಾಗಿ ನಿರ್ವಹಣೆ ಮಾಡದೆ ಕಾರ್ಖಾನೆಯನ್ನು ಅವನತಿ ಹಂತಕ್ಕೆ ತರಲಾಗಿದೆ. ಸರ್ಕಾರಕ್ಕೆ ಕಾರ್ಖಾನೆ ಆರಂಭ ಮಾಡಲು ಮನಸ್ಸಿಲ್ಲ ಎಂದರು.
ಖಾಸಗೀಕರಣ ಮಾಡುವುದಿಲ್ಲ ಎಂದು ಸರ್ಕಾರ ಸದನದಲ್ಲಿ ಭರವಸೆ ನೀಡಿದೆ. ಆದರೆ, ಪಾಂಡವಪುರ ಪಿಎಸ್‌ಎಸ್‌ಕೆಯನ್ನು ಖಾಸಗಿಯವರಿಗೆ ಕೊಡಲಿಲ್ಲವೇ? ಕಾರ್ಖಾನೆ ಗುತ್ತಿಗೆ ಪಡೆದಿರುವ ನಿರಾಣಿ ಯಾವ ಪಕ್ಷದ ವರು? ಮೈಷುಗರ್ ಕಾರ್ಖಾನೆಯನ್ನು ತೆಗೆದುಕೊಳ್ಳಲು ಹೋಗಿದ್ದ ಗಿರಾಕಿ ನಿರಾಣಿ ಎಂದು ವ್ಯಂಗ್ಯವಾಡಿದರು.
ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ಆರಂಭಿಸಬೇಕು ಎಂದು ರೈತ ಹಿತರಕ್ಷಣಾ ಸಮಿತಿ ಈ ಹಿಂದೆ ಎರಡು ಬಾರಿ ಒತ್ತಡ ಮಾಡಿದೆ. ರಾಜ್ಯದ 65 ಸಕ್ಕರೆ ಕಾರ್ಖಾನೆಯಲ್ಲಿಮೈಷುಗರ್ ಮಾತ್ರ ಸರ್ಕಾರಿ ಸ್ವಾಮ್ಯದಲ್ಲಿರುವುದು. ರೈತರಿಗೆ ಅನುಕೂಲವಾಗಲಿ ಎಂದು ಮೈಷುಗರ್ ಕಾರ್ಖಾನೆ ಕಟ್ಟಿಸಲಾ ಯಿತು. ಕಾರಣಾಂತರದಿಂದಕಾರ್ಖಾನೆ ನಷ್ಟ ವಾಗಿದೆ ಎಂದು ಮಾರುವುದಕ್ಕೆ ಆಗು ವುದಿಲ್ಲ. ನಷ್ಟಕ್ಕೆ ಕಾರಣ ಹುಡುಕದೇ ಕಾರ್ಖಾನೆ ಮಾರಾಟಕ್ಕೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮುಖಂಡರಾದ ದಡದಪುರದ ಶಿವಣ್ಣ, ಗಣಿಗ ರವಿಕುಮಾರ್, ಎಂ.ಎಸ್.ಚಿದಂಬರ್, ಮಧು ಜಿ.ಮಾದೇಗೌಡ, ಸಿ.ಡಿ.ಗಂಗಾಧರ್, ಗೀತಾ, ಮಹೇಶ್, ಜಬೀವುಲ್ಲಾ, ಕೃಷ್ಣ, ಎಂ.ಡಿ.
ಜಯರಾಂ, ಸಮಿತಿಯ ಉಪಾಧ್ಯಕ್ಷ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಸಿಐಟಿಯುನ ಸಿ.ಕುಮಾರಿ, ಕನ್ನಡಸೇನೆ ಮಂಜುನಾಥ್, ಸುಧೀರ್‌ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.