ADVERTISEMENT

ಸೇಂದಿ ಸಾಗಣೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮೇ 2025, 16:16 IST
Last Updated 20 ಮೇ 2025, 16:16 IST
ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳವಾಡಿ ಬಳಿ ಅಕ್ರಮವಾಗಿ ಸೇಂದಿ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಡಿವೈಎಸ್ಪಿ ರಾಧಾಮಣಿ ನೇತೃತ್ವದ ತಂಡ ಈಚೆಗೆ ಬಂಧಿಸಿದೆ
ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳವಾಡಿ ಬಳಿ ಅಕ್ರಮವಾಗಿ ಸೇಂದಿ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಡಿವೈಎಸ್ಪಿ ರಾಧಾಮಣಿ ನೇತೃತ್ವದ ತಂಡ ಈಚೆಗೆ ಬಂಧಿಸಿದೆ   

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳವಾಡಿ ಬಳಿ ಪ್ಯಾಸೆಂಜರ್‌ ಆಟೋದಲ್ಲಿ ಅಕ್ರಮವಾಗಿ ಸೇಂದಿ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಡಿವೈಎಸ್ಪಿ ರಾಧಾಮಣಿ ನೇತೃತ್ವದ ತಂಡ  ಈಚೆಗೆ ಬಂಧಿಸಿದೆ.

ಬೆಳವಾಡಿ ಗ್ರಾಮದ ಶಿವಕುಮಾರ್‌ ಬಂಧಿತ. ಆತನಿಂದ 22 ಲೀಟರ್‌ ಸೇಂದಿಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಪ್ರಫುಲ್ಲಚಂದ್ರ ತಿಳಿಸಿದ್ದಾರೆ.

ಮೈಸೂರು ವಿಭಾಗೀಯ ಅಬಕಾರಿ ಜಂಟಿ ಆಯುಕ್ತ ಬಸವರಾಜು ಹಡಪದ ಮತ್ತು ಉಪ ಆಯುಕ್ತ ನಾಗಶಯನ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.