ಕಿಕ್ಕೇರಿ: ತೋಟದಲ್ಲಿದ್ದ ಸೇವಂತಿಗೆ ಹೂವು ಕೀಳಲು ತೆರಳಿದ್ದಾಗ ವಿಷಪೂರಿತ ಹಾವು ಕಡಿದು ರೈತ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮರಿಯನಹೊಸೂರು ಗ್ರಾಮದ ರೈತ ಕೆಂಪೇಗೌಡರ ಪತ್ನಿ ಗೌರಮ್ಮ(45) ಮೃತರು.
ಹಾವು ಕಡಿತದಿಂದ ತೀವ್ರ ಅಸ್ವಸ್ಥರಾದ ಅವರನ್ನು ತುರ್ತು ಚಿಕಿತ್ಸೆಗೆ ಕಿಕ್ಕೇರಿ ಆಸ್ಪತ್ರೆಗೆ ಕರೆದೊಯ್ದಿದ್ದಾಗ ಚಿಕಿತ್ಸೆ ಲಭ್ಯವಿಲ್ಲದೆ ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಮೃತರಾದರು ಎನ್ನಲಾಗಿದೆ.
ಮೃತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಅವರಿಗೆ ಪತಿ, ನಾಲ್ವರು ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.