ADVERTISEMENT

ದಿನದ ಊಟಕ್ಕೂ ಸೋಲಿಗರ ಪರದಾಟ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 16:47 IST
Last Updated 31 ಮಾರ್ಚ್ 2020, 16:47 IST
ಸಂತೇಬಾಚಹಳ್ಳಿ ಹೋಬಳಿ ಹಡವನಹಳ್ಳಿ ಕೊಪ್ಪಲು ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಂಬಂಧ ಸೋಲಿಗ ಜನಾಂಗದ ಮುಖಂಡರೊಂದಿಗೆ ರಾಜಸ್ವ ನಿರೀಕ್ಷಕ ರಾಮಚಂದ್ರು ಮತ್ತು ಗ್ರಾಮಲೆಕ್ಕಾಧಿಕಾರಿ ಹರೀಶ್, ಗ್ರಾ.ಪಂ.ಕಾರ್ಯದರ್ಶಿ ರಂಜಿತಾ ಚರ್ಚಿಸಿದರು.
ಸಂತೇಬಾಚಹಳ್ಳಿ ಹೋಬಳಿ ಹಡವನಹಳ್ಳಿ ಕೊಪ್ಪಲು ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಂಬಂಧ ಸೋಲಿಗ ಜನಾಂಗದ ಮುಖಂಡರೊಂದಿಗೆ ರಾಜಸ್ವ ನಿರೀಕ್ಷಕ ರಾಮಚಂದ್ರು ಮತ್ತು ಗ್ರಾಮಲೆಕ್ಕಾಧಿಕಾರಿ ಹರೀಶ್, ಗ್ರಾ.ಪಂ.ಕಾರ್ಯದರ್ಶಿ ರಂಜಿತಾ ಚರ್ಚಿಸಿದರು.   

ಸಂತೇಬಾಚಹಳ್ಳಿ: ಹೋಬಳಿಯ ಗಡಿ ಗ್ರಾಮ ಹಡವನಹಳ್ಳಿ ಕೊಪ್ಪಲು ಗ್ರಾಮದಲ್ಲಿ ವಾಸಿಸುತ್ತಿರುವ 40 ಸೋಲಿಗರ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ.

ಸೋಲಿಗರ ಕುಟುಂಬ ಅಲೆಮಾರಿ ಜನಾಂಗವಾಗಿದ್ದು ಜಾತ್ರೆ, ಸಂತೆಗಳಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಂದಿನ ಊಟವನ್ನು ಅಂದೇ ದುಡಿದು ತಿನ್ನುವ ಪರಿಸ್ಥಿತಿ ಇತ್ತು. ಆದರೆ ಈಗ ಲಾಕ್‌ಡೌನ್ ಇದ್ದು ಜಾತ್ರೆ, ಸಂತೆಗಳು ರದ್ದಾಗಿವೆ.ಹೀಗಾಗಿ ಈ ಕುಟುಂಬಗಳಿಗೆ ಒಂದು ಹೊತ್ತಿನ ಊಟಕ್ಕೂ ತತ್ವಾರ ಬಂದಿದೆ.

ಅಕ್ಕಪಕ್ಕದ ಗ್ರಾಮಗಳಿಗೂ ಹೋಗಲೂ ಆಗುತ್ತಿಲ್ಲ. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿವೆ. ಆಸ್ಪತ್ರೆಗೆ ಹೋಗಲೂ ನಮ್ಮ ಬಳಿ ಹಣವಿಲ್ಲ.

ADVERTISEMENT

ತುಂಬಾ ದೂರ ನಾವುಗಳು ನಡೆದುಕೊಂಡೇ ಹೋಗಬೇಕು. ಪೊಲೀಸ್ ನವರು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಹೋಗಲು ಬಿಡುತ್ತಿಲ್ಲ. ವ್ಯಾಪಾರ ಮಾಡಲೂ ಆಗುತ್ತಿಲ್ಲ. ನೀರು ಕುಡುದೇ ಬದುಕುವ ಪರಿಸ್ಥಿತಿ ಇದೆ. ಆದಷ್ಟು ಬೇಗ ನಮ್ಮ ಗ್ರಾಮದ ಜನರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಕೊಡಬೇಕು ಎಂದು ಒತ್ತಾಯಿಸಿದರು.

‘ಸೋಲಿಗ ಜನಾಂಗಕ್ಕೆ ಬೇಕಾಗಿ ರುವ ಊಟದ ಸೌಲಭ್ಯ ಒದಗಿಸ ಲಾಗುವುದು. ಯಾರೂ ಊಟವಿಲ್ಲದೇ ಪರಿತಪಿಸಬೇಕಾಗಿಲ್ಲ. ಎಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡಲಾಗುವುದು’ ಎಂದು ಕಂದಾಯ ನಿರೀಕ್ಷಕ ರಾಮಚಂದ್ರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.