ಸಂತೇಬಾಚಹಳ್ಳಿ: ಹೋಬಳಿಯ ಆದಿಹಳ್ಳಿ ಬೆಟ್ಟದ ಮೇಲಿರುವ ತಿಮ್ಮಪ್ಪಸ್ವಾಮಿ ಹಾಗೂ ಬೆಟ್ಟದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ನಡೆಯಿತು.
‘ಫೆ.19ರಂದು ಲೋಕ ಕಲ್ಯಾಣಕ್ಕಾಗಿ ಅಘಲಯ ಭಜರಂಗಿ ಗೆಳೆಯರ ಬಳಗದಿಂದ ವಿಶೇಷ ಪೂಜೆ, ಹೋಮ, ಹೂವಿನ ಅಲಂಕಾರ, ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ದೇವಾಲಯಕ್ಕೆ ಮೂಲ ಸೌಕರ್ಯಗಳ ಕೊರತೆ ಇದೆ. ಕುಡಿಯುವ ನೀರು, ರಸ್ತೆ ಕಲ್ಪಿಸಬೇಕಿದೆ. ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯಿತಿಗೆ ಆದಿಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಸೌಕರ್ಯ ಕಲ್ಪಿಸಬೇಕು’ ಎಂದು ಅರ್ಚಕ ಸಂಪತ್ ಕುಮಾರ್ ಮನವಿ ಮಾಡಿದರು.
ಅಘಲಯ ಮುಖಂಡರಾದ ಎ.ಸಿ. ಮಂಜು, ಶ್ರೀನಿವಾಸ್, ಎ.ಎಂ.ದಿನೇಶ್, ಎ.ಎಸ್.ಮಂಜುನಾಥ್, ರಾಘವೇಂದ್ರ, ಸಾಗರ್, ಪವನ್, ಸುನಿಲ್, ನವೀನ್, ಯಶವಂತ, ಪುನೀತ್, ಯಶಸ್ಸು, ಅರುಣಾ, ಜಯಂತ್, ಪ್ರತಾಪ್, ಅಣ್ಣಯ್ಯ, ಶಿವ, ರುದ್ರೇಶ್, ದೇವರಾಜು, ರಮೇಶ್, ಆದಿಹಳ್ಳಿ ರಾಜೇಗೌಡ, ಎಲ್.ಐ.ಸಿ ಮೊಗಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.