ADVERTISEMENT

ಶ್ರೀರಂಗನಾಥಸ್ವಾಮಿ ರಥೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 7:08 IST
Last Updated 18 ಫೆಬ್ರುವರಿ 2021, 7:08 IST
ಶ್ರೀರಂಗಪಟ್ಟಣದಲ್ಲಿ ಫೆ.19ರಂದು ರಥಸಪ್ತಮಿ ನಿಮಿತ್ತ ನಡೆಯಲಿರುವ ಶ್ರೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಕಾಷ್ಠ ರಥವನ್ನು ಸಿಂಗರಿಸಲಾಗಿದೆ
ಶ್ರೀರಂಗಪಟ್ಟಣದಲ್ಲಿ ಫೆ.19ರಂದು ರಥಸಪ್ತಮಿ ನಿಮಿತ್ತ ನಡೆಯಲಿರುವ ಶ್ರೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಕಾಷ್ಠ ರಥವನ್ನು ಸಿಂಗರಿಸಲಾಗಿದೆ   

ಶ್ರೀರಂಗಪಟ್ಟಣ: ರಥ ಸಪ್ತಮಿ ನಿಮಿತ್ತ ಪಟ್ಟಣದಲ್ಲಿ ಫೆ.19ರ ಶುಕ್ರವಾರ ಶ್ರೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ.

ರಥೋತ್ಸವಕ್ಕಾಗಿ 60 ಅಡಿ ಎತ್ತರದ ರಥವನ್ನು ಸಿಂಗರಿಸಲಾಗಿದೆ. ಬಣ್ಣ ಬಣ್ಣದ ವಸ್ತುಗಳಿಂದ ಅಲಂಕಾರ ಮಾಡಲಾಗಿದೆ. ಕಾಷ್ಠ ರಥದ ಮೇಲೆ ಬಿದಿರು ಗಳಗಳ ಸಹಾಯದಿಂದ 7 ಅಂತಸ್ತುಗಳನ್ನು ಸಜ್ಜುಗೊಳಿಸಲಾಗಿದೆ.

ಫೆ.19ರ ಮಧ್ಯಾಹ್ನ 1.30ಕ್ಕೆ ಕೃತ್ತಿಕಾ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದೇವಾಲಯದ ಸುತ್ತ ಭಕ್ತರು ಕಾಷ್ಠ ರಥವನ್ನು ಎಳೆಯಲಿದ್ದಾರೆ. ಹಣ್ಣು, ದವನ ಎಸೆದು ಭಕ್ತಿ ಪ್ರದರ್ಶಿಸಲಿದ್ದಾರೆ. ರಥೋತ್ಸವದ ನಿಮಿತ್ತ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.

ADVERTISEMENT

ಇದಕ್ಕೂ ಮುನ್ನ ಮುಂಜಾನೆ 6.30ಕ್ಕೆ ಸೂರ್ಯ ಮಂಡಲೋತ್ಸವ ಜರುಗಲಿದೆ. ಪಟ್ಟಣದ ಮುಖ್ಯ ಬೀದಿಗಳಲ್ಲಿ ಉತ್ಸವ ನಡೆಯಲಿದೆ. ಫೆ.20ರಂದು 8ನೇ ತಿರುನಾಳ್‌ ಡೋಲೋತ್ಸವ, ತಿರುವೇಡುಪರಿ ಉತ್ಸವ, ಫೆ.21ರಂದು 9ನೇ ತಿರುನಾಳ್‌ ಸಂಧಾನ ಸೇವೆ, ಅವಭೃತ ತೀರ್ಥ ಸ್ನಾನ, ಸಂಜೆಗೆ ಫಣಿಮಾಲೆ, ಪೂರ್ಣಾಹುತಿ, 22ರಂದು ದ್ವಾದಶ ಪುಷ್ಪಯಾಗ, ಧ್ವಜಾವರೋಹಣ, ಮೂಕಬಲಿ ಕೈಂಕರ್ಯಗಳು ನಡೆಯಲಿವೆ ಎಂದು ದೇವಾಲಯದ ಪ್ರಧಾನ ಅರ್ಚಕ ಎಲ್‌. ವಿಜಯಸಾರಥಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.