ADVERTISEMENT

ಎಸ್ಟಿ ಮೀಸಲಾತಿ ಜನಜಾಗೃತಿ ಸಮಾವೇಶ ಸೆ.29ಕ್ಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 11:06 IST
Last Updated 21 ಸೆಪ್ಟೆಂಬರ್ 2023, 11:06 IST
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೆ.29ರ ಎಸ್ಟಿ ಮೀಸಲಾತಿ ಜನಜಾಗೃತಿ ಸಮಾವೇಶ ಹಾಗೂ ವಿಶ್ವಕರ್ಮ ಜಯಂತೋತ್ಸವದ ಕುರಿತು ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ಮಾತನಾಡಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೆ.29ರ ಎಸ್ಟಿ ಮೀಸಲಾತಿ ಜನಜಾಗೃತಿ ಸಮಾವೇಶ ಹಾಗೂ ವಿಶ್ವಕರ್ಮ ಜಯಂತೋತ್ಸವದ ಕುರಿತು ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ಮಾತನಾಡಿದರು.   

ಮಳವಳ್ಳಿ: ‘ತಾಲ್ಲೂಕಿನ ಹಲಗೂರಿನಲ್ಲಿ ಸೆ.29ರಂದು ವಿಶ್ವಕರ್ಮ ಮಹಾಸಭಾ ಹಾಗೂ ಶ್ರೀಕಾಳಿಕಾಂಬ ಸೇವಾ ಭಕ್ತ ಮಂಡಳಿಯಿಂದ ಎಸ್ಟಿ ಮೀಸಲಾತಿ ಜನಜಾಗೃತಿ ಸಮಾವೇಶ ಹಾಗೂ ವಿಶ್ವಕರ್ಮ ಜಯಂತೋತ್ಸವ ನಡೆಸಲಾಗುವುದು’ ಎಂದು ವಿಶ್ವಕರ್ಮ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಮಾತನಾಡಿ, ಹಲಗೂರಿನ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಸೆ.29ರಂದು ಬೆಳಿಗ್ಗೆ 10.30ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ವಿಶ್ವಕರ್ಮ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಉದ್ಘಾಟಿಸಲಿದ್ದು, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ ಎಂದರು.

ವಿಶ್ವಕರ್ಮ ಸಮ್ಮಾನ್ ನಿಧಿಯನ್ನು ಸ್ಥಾಪಿಸಿ ₹13 ಸಾವಿರ ಕೋಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹಾಸಭಾದಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ADVERTISEMENT

ಮುಖಂಡರಾದ ಅಣ್ಣಯ್ಯಸ್ವಾಮಿ, ಬಸವಣ್ಣಚಾರಿ, ಸೋಮಣ್ಣ, ಮಂಟೇಸ್ವಾಮಿ, ಸಿದ್ದಪ್ಪಾಜಿ, ನಿಂಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.