
ಪ್ರಜಾವಾಣಿ ವಾರ್ತೆಬಂಧನ
(ಪ್ರಾತಿನಿಧಿಕ ಚಿತ್ರ)
ಬೆಳಕವಾಡಿ: ಸಮೀಪದ ಜವನಗಹಳ್ಳಿ ಗುಡ್ಡದ ಬಳಿ ಮಳವಳ್ಳಿ-ಕೊಳ್ಳೇಗಾಲಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಕೆಳಭಾಗದ ಕಾವೇರಿ ನದಿ ದಡದಲ್ಲಿ ಕುಳಿತು ಗಾಂಜಾ ಸೇವನೆ ಮಾಡುತ್ತಿದ್ದ ಬೆಂಗಳೂರಿನ ದೀಪಕ್, ದಯಾನಂದ, ರೋಹಿತ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಸಿಗರೇಟುಗಳಿಗೆ ಗಾಂಜಾ ಸೊಪ್ಪು ಹಾಕಿ ಸೇವಿಸುತ್ತಿದ್ದಾಗ ಪಿಎಸ್ಐ ಬಿ.ವಿ.ಪ್ರಕಾಶ್ ತಂಡ ದಾಳಿ ಮಾಡಿ ಆರೋಪಿಗಳನ್ನು ಶನಿವಾರ ವಶಕ್ಕೆ ಪಡೆಯಿತು.
ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.