ಮದ್ದೂರು: ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೆ ಪಟ್ಟಣದ ಎಳನೀರು ಮಾರುಕಟ್ಟೆಯ ವರ್ತಕರು, ಹಮಾಲಿಗಳು, ಕೂಲಿ ಕಾರ್ಮಿಕರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಸೇನೆ ಹಾಗೂ ಪ್ರಧಾನಿ ನರೇಂದ್ರಮೋದಿ ಪರ ಘೋಷಣೆಗಳನ್ನು ಕೂಗಿದರು.
ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ ಮಾತನಾಡಿ, ‘ಪಾಕಿಸ್ತಾನದಲ್ಲಿ ಉಗ್ರರನ್ನು ದಮನ ಮಾಡಿದ ನಮ್ಮ ಹೆಮ್ಮೆಯ ಸೈನಿಕರ ಸೇವೆಯನ್ನು ಸ್ಮರಿಸಬೇಕು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ನಾಗರೀಕರ ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ 90 ಉಗ್ರರನ್ನು ಅವರದ್ದೇ ಅಡಗು ತಾಣ ಪಾಕಿಸ್ತಾನದಲ್ಲಿ ಸಂಹಾರ ಮಾಡಿರುವುದು ಶ್ಲಾಘನೀಯ’ ಎಂದರು.
ವರ್ತಕರ ಸಂಘದ ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ರಾಜು, ನಿರ್ದೇಶಕರಾದ ಯೋಗೇಶ್, ಎಸ್.ಶಿವರಾಜು, ಶಿವಣ್ಣ, ಬೆಟ್ಟೇಗೌಡ, ಶಿವು, ಮುಖಂಡರಾದ ಲೋಕೇಶ್, ಕೃಷ್ಣ, ಹೊನ್ನೇಶ್, ವೆಂಕಟೇಶ್, ಸಂದೀಪ್, ಮಲ್ಲರಾಜು, ಪ್ರತಾಪ್, ಸುರೇಶ್, ಕುಮಾರ್, ಇಮ್ರಾನ್, ರಫಿಕ್, ಸಿ.ಎಸ್.ಪ್ರಕಾಶ್, ವಿನೋದ್ ರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.