
ಪಾಂಡವಪುರ: ಮಕ್ಕಳ ಪ್ರತಿ ಹಂತದ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವವಾದುದು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ವಿ.ಅಶ್ವತ್ಥ್ ನಾರಾಯಣ್ ಹೇಳಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ನಡೆದ ಪೋಷಕರ ಮಹಾಸಭೆಯಲ್ಲಿ ಅವರು ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಜತೆಗೆ ಪೋಷರು ಹೆಚ್ಚಿನ ನಿಗಾವಹಿಸಬೇಕಿದೆ’ ಎಂದರು.
ಉಪ ಪ್ರಾಂಶುಪಾಲ ಎನ್.ಮಹದೇವಪ್ಪ ಮಾತನಾಡಿ, ‘ಮಕ್ಕಳ ಹಿತಕ್ಕಾಗಿ ಆರ್‌ಟಿಐ ಕಾಯ್ದೆ, ಮಕ್ಕಳ ರಕ್ಷಣಾ ಸಮಿತಿ, ಪೋಕ್ಸೋ ಕಾಯ್ದೆ, ಮಕ್ಕಳ ಹಕ್ಕುಗಳ ಸಂಘಗಳು ಇವೆ. ಮಕ್ಕಳು ಕಲಿಕೆಯ ಪ್ರಗತಿಗಾಗಿ ವಿಶೇಷ ತರಗತಿಗಳು, ಗುಂಪು ಅಧ್ಯಯನ, ಪರೀಕ್ಷಾ ಪದ್ದತಿಯಲ್ಲಿ ಪದ್ದತಿಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿವೆ’ ಎಂದರು.
ಸಹ ಶಿಕ್ಷಕಿ ಕರೀಮುನ್ನೀಸಾ ಮಾತನಾಡಿ, ‘ಪಾಠ ಆಧಾರಿತವಾಗಿ ಮೌಲ್ಯಮಾಪನದ ವಿಶ್ಲೇಷಣೆ, ಪ್ರೋತ್ಸಾಹದಾಯಕ ಯೋಜನೆಗಳಾದ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟದ ಜತೆಗೆ ಮೊಟ್ಟೆ, ಬಾಳೆಹಣ್ಣು, ಹಾಲು ನೀಡಲಾಗುತ್ತಿದ್ದು, ಮಕ್ಕಳ ಕಲಿಕೆಯ ಬೆಳವಣಿಗೆಗೆ ಪೂಕರವಾಗಿವೆ. ಆದರೆ, ಪೋಷಕರ ಜವಾಬ್ದಾರಿ ಮತ್ತು ಭಾಗವಹಿಸುವಿಕೆ ಬಹು ಮುಖ್ಯ’ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಹಾರೋಹಳ್ಳಿ ಮಾಕೇಗೌಡ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎನ್.ಕೃಷ್ಣೇಗೌಡ, ಅಬಿದಾ, ಉಮಾ, ಉಪ ಪ್ರಾಂಶುಪಾಲ ಎನ್.ಮಹದೇವಪ್ಪ, ಸಹ ಶಿಕ್ಷಕರಾದ ಬಿ.ಆರ್.ಸೌಮ್ಯಲತಾ, ಬಿ.ಚಂಪಾ, ಎಸ್.ಟಿ.ಸವಿತಾ, ತ್ರಿವೇಣಿ, ಚನ್ನೇಗೌಡ, ದೈಹಿಕ ಶಿಕ್ಷಣ ಶಿಕ್ಷಕ ಸಿ.ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.