ADVERTISEMENT

ನಾಗಮಂಗಲ: ಮನೆ ಬೀಗ ಮುರಿದು ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:59 IST
Last Updated 3 ಜೂನ್ 2025, 13:59 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

– ಐ ಸ್ಟಾಕ್ ಚಿತ್ರ

ನಾಗಮಂಗಲ: ಮನೆಯ ಬಾಗಿಲ ಬೀಗ ಮುರಿದು ಬೀರುವಿನಲ್ಲಿ ಇಡಲಾಗಿದ್ದ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ADVERTISEMENT

ತಾಲ್ಲೂಕಿನ ಬೆಳ್ಳೂರು ಹೋಬಳಿಯ ಲಕ್ಷೀಪುರದ ನಿವಾಸಿ ಶ್ವೇತಾ ಮಂಜುನಾಥ್ ಎಂಬುವರು ಮೇ 15ರಂದು ಕಲಸಿಂದ ಗ್ರಾಮಕ್ಕೆ ಹೋಗಿದ್ದು, 31ರಂದು ಮರಳಿ ಮನೆಗೆ ಬಂದಾಗ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬೀರುವಿನ ಲಾಕರ್‌ನಲ್ಲಿ ಇಟ್ಟಿದ್ದ 19 ಗ್ರಾಂ ತೂಕದ ನೆಕ್ಲೇಸ್, 4 ಗ್ರಾಂ ತೂಕದ ಎರಡು ಉಂಗುರ ಕಳವು ಮಾಡಿದ್ದಾರೆ ಎಂದು ಮನೆಯ ಮಾಲೀಕರು ದೂರು ನೀಡಿದ್ದಾರೆ.

ಬೆಳ್ಳೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.