ADVERTISEMENT

ಮೊಟ್ಟೆ: ಯಾರ ಮೇಲೂ ಒತ್ತಡ ಹೇರಿಲ್ಲ– ಸಚಿವ ಬಿ.ಸಿ. ನಾಗೇಶ್‌

ಈಗ ಮೊಟ್ಟೆ, ಬಾಳೆಹಣ್ಣು; ಮುಂದೆ ಇನ್ನಷ್ಟು ಪದಾರ್ಥ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 19:45 IST
Last Updated 11 ಡಿಸೆಂಬರ್ 2021, 19:45 IST
B C Nagesh, Primary and Secondary Education Minister. Photo by S K Dinesh
B C Nagesh, Primary and Secondary Education Minister. Photo by S K Dinesh   

ಮಂಡ್ಯ: ‘ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಜೊತೆಗೆ ಬಾಳೆಹಣ್ಣನ್ನೂ ವಿತರಿಸಲಾಗುತ್ತಿದೆ. ರಾಜ್ಯದ ವಿವಿಧೆಡೆ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದೆ. ಹೀಗಾಗಿ ಪೌಷ್ಟಿಕಾಂಶವನ್ನು ಹೆಚ್ಚಿಸುವುದು ಅವಶ್ಯ’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಪ್ರತಿಪಾದಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು ತಜ್ಞರ ಸಲಹೆ ಮೇರೆಗೆ ಮೊಟ್ಟೆ ವಿತರಿಸಲಾಗುತ್ತಿದೆ. ಯಾರ ಮೇಲೂ ಒತ್ತಡ ಹೇರಿಲ್ಲ. ಮೊಟ್ಟೆ, ಬಾಳೆಹಣ್ಣಿನೊಂದಿಗೆ ಇತರ ಪೌಷ್ಟಿಕಾಂಶವುಳ್ಳ ಪದಾರ್ಥಗಳನ್ನೂ ಆಯ್ಕೆ ಮಾಡಲಾಗಿದ್ದು, ತಜ್ಞರು ಒಪ್ಪಿದರೆ ಅವುಗಳನ್ನು ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT