ADVERTISEMENT

ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ಜಲ ಸಮಾಧಿ

ಶ್ರೀರಂಗಪಟ್ಟಣ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 8:32 IST
Last Updated 14 ಫೆಬ್ರುವರಿ 2020, 8:32 IST
   

ಶ್ರೀರಂಗಪಟ್ಟಣ: ಪಟ್ಟಣದ ರೈಲು ನಿಲ್ದಾಣ ಸಮೀಪಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಯುವಕರು ನದಿ ಸೆಳವಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮುಜಾಸಿಮ್ (17), ತೌಸೀಫ್ (17) ಮತ್ತುಇಫ್ತಿಕಾರ್ (18) ಮೃತರು.

ಮುಜಾಸೀಮ್‌ ಶವ ಪತ್ತೆಯಾಗಿದೆ. ಉಳಿದವರ ಶವಗಳಿಗೆ ಹುಡುಕಾಟ ನಡೆದಿದೆ.ಎಲ್ಲರೂ ಹಾಸನ ಜಿಲ್ಲೆಯ ಅರಸೀಕೆರೆ ಮೂಲದವರು ಎಂದು ತಿಳಿದು ಬಂದಿದೆ.

ಮೈಸೂರಿನ ಮದರಸದಲ್ಲಿ ಅರೇಬಿಕ್ ವ್ಯಾಸಂಗ ಮಾಡುತ್ತಿದ್ದರು. ಮೀನು ಹಿಡಿಯಲು ನದಿಗೆ ಇಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಶ್ರೀರಂಗಪಟ್ಟಣದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.