ADVERTISEMENT

ಅಕಾಲಿಕ ಮಳೆ: ನೂರಾರು ಎಕರೆ ಭತ್ತ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 18:02 IST
Last Updated 2 ಜನವರಿ 2026, 18:02 IST
ಗುರುವಾರ ಮಧ್ಯರಾತ್ರಿ ಸುರಿದ ಅಕಾಲಿಕ ಧಾರಾಕಾರ ಮಳೆಗೆ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದಲ್ಲಿ ಕಟಾವು ಆಗಿದ್ದ ಭತ್ತದ ಗದ್ದೆಯಲ್ಲಿ ನೀರು ನಿಂತಿದೆ
ಗುರುವಾರ ಮಧ್ಯರಾತ್ರಿ ಸುರಿದ ಅಕಾಲಿಕ ಧಾರಾಕಾರ ಮಳೆಗೆ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದಲ್ಲಿ ಕಟಾವು ಆಗಿದ್ದ ಭತ್ತದ ಗದ್ದೆಯಲ್ಲಿ ನೀರು ನಿಂತಿದೆ   

ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕಸಬಾ, ಹಲಗೂರು ಹೋಬಳಿಯ ವಿವಿಧೆಡೆ ಗುರುವಾರ ರಾತ್ರಿ ಅಕಾಲಿಕ ಧಾರಾಕಾರ ಮಳೆಯಾಗಿದ್ದು, ನೂರಾರು ಎಕರೆಯಲ್ಲಿ ಭತ್ತದ ಬೆಳೆ ಮುಳುಗಿದೆ. 

ತಾಲ್ಲೂಕಿನ ನೆಲಮಾಕನಹಳ್ಳಿ, ತಳಗವಾದಿ,‌ ಮಾದಹಳ್ಳಿ, ಗುಳಘಟ್ಟ, ಕಂದೇಗಾಲ, ನೆಲ್ಲೂರು, ದುಗ್ಗನಹಳ್ಳಿ ತಾಲ್ಲೂಕಿನ ಬಹುತೇಕ ಕಡೆ ಮಧ್ಯರಾತ್ರಿ 2 ಗಂಟೆ ಕಾಲ ಮಳೆಯಾಯಿತು.

‘ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹ 30 ಸಾವಿರ ಪರಿಹಾರ ನೀಡಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಎನ್.ಭರತ್ ರಾಜ್ ಆಗ್ರಹಿಸಿದ್ದಾರೆ.

ADVERTISEMENT

ಚಾಮರಾಜನಗರ; ಬಿರುಸು ಮಳೆ : ಜಿಲ್ಲೆಯ ಹಲವೆಡೆ ಶುಕ್ರವಾರ ಬೆಳಿಗ್ಗೆ ಬಿರುಸಿನ ಮಳೆಯಾಯಿತು. ನಗರದಲ್ಲಿ ಜೋರು ಮಳೆಯಾದರೆ, ಯಳಂದೂರು, ಸಂತೇಮರಹಳ್ಳಿ ಹಾಗೂ ಗುಂಡ್ಲುಪೇಟೆಯಲ್ಲಿ ಸಾಧಾರಣ ಮಳೆ ಬಿತ್ತು. ಮಳೆಯಿಂದಾಗಿ ಕೆಲಹೊತ್ತು ಮೋಡಕವಿದಿದ್ದರೆ ಕೆಲಹೊತ್ತು ಬಿಸಿಲಿನ ವಾತಾವರಣ ಇತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.