ಭಾರತೀನಗರ: ಸಮೀಪದ ಮುಟ್ಟನಹಳ್ಳಿಯಲ್ಲಿ ದಂಡಿನ ಮಾರಮ್ಮನ ವಿಶೇಷ ಪೂಜಾ ಮಹೋತ್ಸವದಲ್ಲಿ ವೆಂಕಟಪ್ಪನ ಹರಿಗೆ ಸೇವೆ ಪೂಜೆ ನಡೆಯಿತು.
ದೇವಾಲಯದ ದಂಡಿನ ಮಾರಮ್ಮನ ಮೂರ್ತಿಯನ್ನು ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಾಲಯದ ಸಮೀಪದಲ್ಲಿ ವೆಂಕಟಪ್ಪ ದೇವರ ಹರಿಗೆಗಳನ್ನು ಪ್ರತಿಷ್ಠಾಪಿಸಿ, ಅಲಂಕರಿಸಿ ನೈವೇದ್ಯ ಸಮರ್ಪಿಸಲಾಯಿತು.
ದಂಡಿನ ಮಾರಮ್ಮ ದೇವಾಲಯದಲ್ಲಿಯೂ ಪೂಜೆ ನೆರವೇರಿಸಲಾಯಿತು. ಹರಿಸೇವೆಯಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ನಂತರ ಅನ್ನಸಂತರ್ಪಣೆ ಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಯಜಮಾನ್ ಎಂಬಿ.ಬೋರಯ್ಯ ಅವರನ್ನು ಅಭಿನಂದಿಸಲಾಯಿತು.
ಯಜಮಾನ್ ದೇಶೀಗೌಡ, ಮುಖಂಡರಾದ ಎಂ.ಸಿ.ವೀರಯ್ಯ, ಚಂದ್ರಶೇಖರ್, ಎಂ.ಡಿ.ಉಮೇಶ್, ಟಿ.ರಮೇಶ್, ಎಂಡಿ ಶಂಕರ, ತಿಮ್ಮಯ್ಯ ಉರುಫ್ ಚಕ್ಕೈದೇಗೌಡ, ಮಂಚೇಗೌಡ, ಪೂಜಾರಿ ಮಂಚೇಗೌಡ, ಪುಟ್ಟೇಗೌಡ ಎಂ.ಟಿ. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.