ADVERTISEMENT

ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ: ಆಕ್ರೋಶ, ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 11:22 IST
Last Updated 9 ಮಾರ್ಚ್ 2022, 11:22 IST
ವೈರಲ್‌ ಆಗಿರುವ ವಿಡಿಯೊ ಸ್ಕ್ರೀನ್‌ಶಾಟ್‌
ವೈರಲ್‌ ಆಗಿರುವ ವಿಡಿಯೊ ಸ್ಕ್ರೀನ್‌ಶಾಟ್‌   

ಮಂಡ್ಯ: ನಾಗಮಂಗಲ ತಾಲ್ಲೂಕು ತೊಳಸಿಕೊಬ್ಬರಿ ಗ್ರಾಮದ ಗ್ರಾಮದೇವತೆ ಹಬ್ಬದ ಅಂಗವಾಗಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಪ್ರದರ್ಶಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಘಟನೆಯು ಮಂಗಳವಾರ ರಾತ್ರಿ ನಡೆದಿದೆ.‌ ನೃತ್ಯ ಕಲಾವಿದೆಯರು ಬಾಲಕನನ್ನು ವೇದಿಕೆಗೆ ಕರೆದು ಆತನೊಂದಿಗೆ ಆಶ್ಲೀಲವಾಗಿ ವರ್ತಿಸಿದ್ದಾರೆ.

ಕಾರ್ಯಕ್ರಮಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸ್ವಾಮೀಜಿ, ರಾಜಕಾರಣಿಗಳು ಭಾಗಿಯಾಗಿದ್ದರು. ನಂತರ ರಸಮಂಜರಿ ನಡೆದಿದೆ.

ADVERTISEMENT

ಊರ ಹಬ್ಬದಲ್ಲಿ ಕೀಳು ಅಭಿರುಚಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ತುಂಡುಡುಗೆ ತೊಟ್ಟ ಅಶ್ಲೀಲ ನೃತ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಇದೊಂದು ನಂಗಾನಾಚ್ ಕಾರ್ಯಕ್ರಮವಾಗಿದೆ ಎಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.