ADVERTISEMENT

ಮಂಡ್ಯ: ವಿಧವೆ– ವಿಧುರ ವಿವಾಹ

​ಪ್ರಜಾವಾಣಿ ವಾರ್ತೆ
Published 12 ಮೇ 2022, 13:04 IST
Last Updated 12 ಮೇ 2022, 13:04 IST
ಕಡಿಲುವಾಗಿಲು ಗ್ರಾಮದಲ್ಲಿ ನಾಗೇಶ ಹಾಗೂ ಸಣ್ಣಮ್ಮ ವಿವಾಹ ಮಾಡಿಕೊಂಡರು
ಕಡಿಲುವಾಗಿಲು ಗ್ರಾಮದಲ್ಲಿ ನಾಗೇಶ ಹಾಗೂ ಸಣ್ಣಮ್ಮ ವಿವಾಹ ಮಾಡಿಕೊಂಡರು   

ಭಾರತೀನಗರ (ಮಂಡ್ಯ ಜಿಲ್ಲೆ): ಸಮೀಪದ ಕಡಿಲುವಾಗಿಲು ಗ್ರಾಮದಲ್ಲಿ 49 ವರ್ಷದ ವಿಧುರ ಹಾಗೂ 45 ವರ್ಷದ ವಿಧವೆ ಗುರುವಾರ ವಿವಾಹ ಮಾಡಿಕೊಂಡರು.

ನಾಗೇಶ ಅವರ ಮೊದಲನೇ ಪತ್ನಿ ಹಾಗೂ ಸಣ್ಣಮ್ಮ ಅವರ ಮೊದಲ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದರು, ಇಬ್ಬರಿಗೂ ಮಕ್ಕಳಿರಲಿಲ್ಲ. ಇಬ್ಬರೂ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಗ್ರಾಮದ ಕೆಲವರು ಇಬ್ಬರಿಗೂ ವಿವಾಹ ಮಾಡಿಸುವ ನಿರ್ಧಾರ ಮಾಡಿದ್ದರು.

ಗ್ರಾಮ ಪಂಚಾಯತಿ ಸದಸ್ಯ ಮಂಚಶೆಟ್ಟಿ ಹಾಗೂ ಗ್ರಾಮಸ್ಥರು ಮನವೊಲಿಸಿ ಇಬ್ಬರನ್ನೂ ವಿವಾಹಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾದರು. ಗ್ರಾಮದ ಈಶ್ವರ ದೇವಾಲಯದಲ್ಲಿ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖ ಸರಳವಾಗಿ ವಿವಾಹ ನೆರವೇರಿಸಲಾಯಿತು.

ADVERTISEMENT

‘ವಯಸ್ಸಿನ ಕಾರಣಕ್ಕಾಗಿ ಎಷ್ಟೋ ವಿಧವೆಯರು, ವಿಧುರರರು ಪುನರ್ವಿವಾಹವಾಗದೇ ಒಬ್ಬಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಇಂತಹವರು ಜೀವನದ ಸಂಧ್ಯಾಕಾಲದಲ್ಲಿ ನೋಡಿಕೊಳ್ಳುವವರಿಲ್ಲದೇ ಪರಿತಪಿಸುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹಾಗಾಗಿ ಇಂತಹ ಪುನರ್ವಿವಾಹಗಳಿಂದ ಇಬ್ಬರಿಗೂ ಸಂಗಾತಿ ಸಿಕ್ಕಿ, ನೆಮ್ಮದಿ ಜೀವನ ಸಾಗಿಸಲು ನೆರವಾಗುತ್ತದೆ’ ಎಂದು ಗ್ರಾ.ಪಂ. ಸದಸ್ಯ ಮಂಚಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.