ಸಾವು
(ಪ್ರಾತಿನಿಧಿಕ ಚಿತ್ರ)
ಮದ್ದೂರು: ತಾಲ್ಲೂಕಿನ ವೈದ್ಯನಾಥಪುರ ದೇವಸ್ಥಾನಕ್ಕೆ ಭಾನುವಾರ ಬೆಳಿಗ್ಗೆ ಬಂದಿದ್ದ ಮಹಿಳೆಯೊಬ್ಬರು ಕಾಲು ಜಾರಿ ಶಿಂಷಾ ನದಿಗೆ ಬಿದ್ದು ಮೃತಪಟ್ಟರು.
ಮಳವಳ್ಳಿ ತಾಲ್ಲೂಕಿನ ಒಡೆಯರ್ ಬಸಾಪುರ ಗ್ರಾಮದ ಗೌರಮ್ಮ (60) ಮೃತರು.
ವೈದ್ಯನಾಥೇಶ್ವರ ದೇವರ ದರ್ಶನಕ್ಕೆ ಹೋಗುವ ಮುಂಚೆ ಗೌರಮ್ಮ ದೇವಸ್ಥಾನದ ಮುಂಭಾಗ ಹರಿಯುವ ಶಿಂಷಾ ನದಿಯಲ್ಲಿ ಕೈ, ಕಾಲು ತೊಳೆಯಲು ಹೋದಾಗ ಬಿದ್ದು ಮೃತಪಟ್ಟಿದ್ದಾರೆ.
ಗೌರಮ್ಮ ಅವರ ಪುತ್ರ ನೀಡಿದ ದೂರಿನ ಅನ್ವಯ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.