ಮಂಡ್ಯ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಬಳಗದ ‘ಭೂಮಿಕಾ ಕ್ಲಬ್’ ವೇದಿಕೆಯು ನಗರದಲ್ಲಿ ಸೆಪ್ಟೆಂಬರ್ 20ರಂದು (ಶನಿವಾರ) ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಉಚಿತ ಪ್ರವೇಶವಿದೆ.
‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್ಸ್’ ಮತ್ತು ಮೈಸೂರಿನ ‘ಜನಹಿತ ಹೌಸಿಂಗ್ ಲೋನ್ಸ್ ಅಂಡ್ ಫೈನಾನ್ಸ್ ಇಂಡಿಯಾ ಸರ್ವಿಸಸ್’ ಸಹಯೋಗದೊಂದಿಗೆ ಇಲ್ಲಿನ ಗುರುಶ್ರೀ ಚಿತ್ರಮಂದಿರ ಮುಂಭಾಗದ ಪಿಇಎಸ್ ಡಿಗ್ರಿ ಕಾಲೇಜು ಆವರಣದಲ್ಲಿರುವ ವಿವೇಕಾನಂದ ರಂಗಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.
ಅತಿಥಿಗಳಾಗಿ ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ರೆಡ್‌ಕ್ರಾಸ್ ಸೊಸೈಟಿಯ ಮಂಡ್ಯ ಸಭಾಧ್ಯಕ್ಷರಾದ ಮೀರಾ ಶಿವಲಿಂಗಯ್ಯ, ಲೋಕಪಾವನಿ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಸುಜಾತಾ ಕೃಷ್ಣ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್. ನಿರ್ಮಲಾ ಪಾಲ್ಗೊಳ್ಳಿದ್ದಾರೆ.
ಮಂಡ್ಯದ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಸಂಗೀತ ಕಾರ್ಯಕ್ರಮ, ಪ್ರಜ್ಞಾ ಜಿ. ಅವರಿಂದ ಭರತನಾಟ್ಯ ಪ್ರಸ್ತುತಿ, ಮಾಜಿ ಮಿಸ್ ಇಂಡಿಯಾ ಸೂಪರ್ ಮಾಡೆಲ್ ಐಶ್ವರ್ಯ ಆರ್.ವಿ.ಗೌಡ ಮತ್ತು ತಂಡದಿಂದ ಭಾರತೀಯ ಫ್ಯಾಷನ್ ಷೋ, ಸಬ್ಸಿಡಿ ಸಾಲಗಳು ಮತ್ತು ವಾಣಿಜ್ಯೋದ್ಯಮದ ಪ್ರಗತಿಯ ಮೂಲಕ ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ, ಪಾಕ ಸ್ಪರ್ಧೆ, ಆಟಗಳು, ಸಂಜೆ ತಿನಿಸು, ನೆಟ್‌ವರ್ಕಿಂಗ್ ಹಲವಾರು ಚಟುವಟಿಕೆಗಳು ಇರಲಿವೆ.
ಮಹಿಳೆಯರಿಂದ ಮಹಿಳೆಯರಿಗಾಗಿ ಈ ಕಾರ್ಯಕ್ರಮ ನಡೆಯಲಿದೆ. ಹೊಸ ವಿಷಯಗಳನ್ನು ಕಲಿಯಲು, ಸಮಾನ ಮನಸ್ಕರೊಂದಿಗೆ ಬೆರೆಯಲು, ಸೃಜನಶೀಲತೆ ಪ್ರದರ್ಶಿಸಲು, ಆರೋಗ್ಯ ಮತ್ತು ಕ್ಷೇಮ ಜಗತ್ತಿನ ಬಗ್ಗೆ ಮಾಹಿತಿ ಪಡೆಯಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಸ್ಪರ್ಧೆ ಏರ್ಪಡಿಸಿ, ಎಲ್ಲರಿಗೂ ಬಹುಮಾನ ನೀಡಲಾಗುವುದು. ಅದೃಷ್ಟವಂತ ಸಭಿಕರೊಬ್ಬರಿಗೆ ₹15 ಸಾವಿರ ಮೌಲ್ಯದ ವಾಟರ್ ಪ್ಯೂರಿಫೈಯರ್ ಗೆಲ್ಲುವ ಅವಕಾಶವಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ಮೊ: 9606912162 ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.