ADVERTISEMENT

‘ಸಬಲೀಕರಣ; ಅರಿವು ಮೂಡಿಸಿ’

ಮಹಿಳಾ ದಿನಾಚರಣೆಯಲ್ಲಿ ಸುನಂದಾ ಜಯರಾಂ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 3:54 IST
Last Updated 21 ಮಾರ್ಚ್ 2022, 3:54 IST
ಮಂಡ್ಯ ನಗರದ ಗಾಂಧಿ ಭವನದಲ್ಲಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ಎಂ.ಶ್ರೀನಿವಾಸ್, ಎಚ್‌.ಎಸ್‌.ಮಂಜು, ಸುನಂದಾ ಜಯರಾಂ, ಮೀರಾ ಶಿವಲಿಂಗಯ್ಯ, ಎಸ್‌.ಶಂಭೂಗೌಡ, ಕಾಳೀರಯ್ಯ, ಚಂದ್ರಕಾಂತ, ಟಿ.ರವಿಶಂಕರ್‌ ಇದ್ದಾರೆ
ಮಂಡ್ಯ ನಗರದ ಗಾಂಧಿ ಭವನದಲ್ಲಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ಎಂ.ಶ್ರೀನಿವಾಸ್, ಎಚ್‌.ಎಸ್‌.ಮಂಜು, ಸುನಂದಾ ಜಯರಾಂ, ಮೀರಾ ಶಿವಲಿಂಗಯ್ಯ, ಎಸ್‌.ಶಂಭೂಗೌಡ, ಕಾಳೀರಯ್ಯ, ಚಂದ್ರಕಾಂತ, ಟಿ.ರವಿಶಂಕರ್‌ ಇದ್ದಾರೆ   

ಮಂಡ್ಯ:ಮಹಿಳಾ ಸಬಲೀಕರಣ ಮತ್ತು ಆಂದೋಲನದ ವಸ್ತು ವಿಷಯದ ಬಗ್ಗೆ ಭವಿಷ್ಯದ ಭಾರತ ಕಟ್ಟುವ ಶಕ್ತಿ ಇರುವ ಶಿಕ್ಷಕಿಯರು ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಬೇಕು ಎಂದು ರೈತ ನಾಯಕಿ ಸುನಂದಾ ಜಯರಾಂ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದಕ್ಷಿಣ ವಲಯ,ಮಂಡ್ಯ ತಾಲ್ಲೂಕು ಘಟಕದ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗ ವಾಗಿ ಭಾನುವಾರ ಆಯೋಜಿಸಿದ್ದ ಶಿಕ್ಷಕಿ ಯರಿಗೆಸನ್ಮಾನ, ಬೀಳ್ಕೊಡುಗೆ, ಅಭಿ ನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಮಹಿಳೆ ಯಾವ ಕಾಲಘಟ್ಟ ದಲ್ಲಿದ್ದಾಳೆ ಎಂಬ ಅರಿವು ಎಲ್ಲರಿಗೂ ಅಗತ್ಯ.ವಾಸ್ತವದಲ್ಲಿ ಮಾರ್ಚ್‌ 8 ಅನ್ನು ದುಡಿಯುವ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ಇತ್ತೀಚೆಗೆ ಈ ದುಡಿಯುವ ಎಂಬ ಪದ ಹೋಗಿ ಕೇವಲ ಮಹಿಳಾ ದಿನ ವಾಗಿ ಆಚರಿಸಲಾಗುತ್ತಿದೆ. ಮಹಿಳೆ ಅಬಲೆಯಲ್ಲ, ಆಕೆ ಪುರುಷಪ್ರಧಾನ ವ್ಯವಸ್ಥೆಯಲ್ಲೇ ಬೆಳೆಯಬೇಕೆಂದಿಲ್ಲ ಎಂಬುದು ಚರ್ಚೆಯಾದರೂ ಅನುಷ್ಠಾನಕ್ಕೆ ಬರುತ್ತಿಲ್ಲ ಎಂದರು.

ADVERTISEMENT

ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಅಕ್ಷರ ಜ್ಞಾನ ನೀಡಿ ತಿದ್ದುವ ಪವಿತ್ರ ಕೆಲಸಶಿಕ್ಷಕರದ್ದಾಗಿದೆ. ಹಾಗಾಗಿ ಮಹಿಳಾ ದಿನವನ್ನು ಗೌರವಯುತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸು ವಂತಾಗಬೇಕು ಎಂದು ಹೇಳಿದರು.

ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮಾಂಡವ್ಯ ಶಿಕ್ಷಣ ಸಂಸ್ಥೆಯ ಮೀರಾ ಶಿವಲಿಂಗಯ್ಯ ಅವರು ಹೊಲಿಗೆ ಯಂತ್ರ ಹಾಗೂ ಫುಡ್‌ಕಿಟ್‌ ವಿತರಿಸಿದರು. ನಂತರ ಉತ್ತಮಶಿಕ್ಷಕಕರನ್ನು ಸನ್ಮಾನಿಸಿದರು.

ಡಯಟ್ಉಪನಿರ್ದೇಶಕ ಶಿವಮಾದಪ್ಪ, ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷಕೆ.ನಾಗೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶಂಭುಗೌಡ, ಬಿಇಒಗಳಾದ ಕಾಳೀರಯ್ಯ,ಚಂದ್ರಕಾಂತ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ವೈ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ.ರವಿಶಂಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.